ತನ್ನ ಸೌಂದರ್ಯ ವರ್ಣಿಸುತ್ತಾ ಮತಯಾಚಿಸಿದ ಲಕ್ಷ್ಮೀ ಹೆಬ್ಬಾಳ್ಕರ್

Apr 21, 2019, 6:37 PM IST

ತನ್ನ ಸೌಂದರ್ಯವನ್ನು ವರ್ಣಿಸುತ್ತಾ ಲಕ್ಷ್ಮೀ ಹೆಬ್ಬಾಳ್ಕರ್ ಮತಯಾಚಿಸಿದ್ದಾರೆ.   ಬೆಳಗಾವಿಯಲ್ಲಿ ಮತಯಾಚನೆ ವೇಳೆ ತನ್ನ ಅಂದವನ್ನು ಹೊಗಳಿಕೊಂಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.  ‘ನಮ್ಮ ಅಕ್ಕ ಒಬ್ಬಾಕಿ ಬರ್ತಾಳ, ಜೋರ ಜೋರ ಭಾಷಣಾ ಮಾಡ್ತಾಳೆ.  ಆಕಿ ನೋಡಲಿಕ್ಕೆ ಚೆಂದ ಅದಾಳ, ಆ ಅಕ್ಕನಿಗೆ ಮತ ಹಾಕುತ್ತೇವೆ’ ಎಂದು ಮತದಾರರು ತಮಗೆ ಮತ ಹಾಕುತ್ತಾರೆಂದು ಹೇಳಿಕೊಂಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.