Dec 29, 2021, 11:32 AM IST
ಬೆಂಗಳೂರು (ಡಿ. 29): ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು, ಫೆಬ್ರವರಿಯಲ್ಲಿ ಉತ್ತುಂಗಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮೇಲೆ ಪ್ರಭಾವ ಬೀರುವ ಸಾದ್ಯತೆ ಇದೆ.
News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲಾ ಹೊಸ ನಿಯಮ?
2021-22 ನೇ ಸಾಲಿನ ಪರೀಕ್ಷಾ ದಿನಾಂಕವನ್ನು ಶಿಕ್ಷಣ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಕೊರೋನಾ ಕಾರಣದಿಂದ ಅರ್ಧವಾರ್ಷಿಕ ಪರೀಕ್ಷೆಯೂ ನಡೆದಿಲ್ಲ. ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಯಾವ ಪರೀಕ್ಷೆಯೂ ನಡೆದಿಲ್ಲ. ವಾರ್ಷಿಕ ಪರೀಕ್ಷೆಯನ್ನು ಆತುರ ಆತುರವಾಗಿ ಪ್ರಕಟಿಸಿದರೆ, ಮಕ್ಕಳಿಗೆ ತಯಾರಿ ಮಾಡಿಕೊಳ್ಳಲು ಸಮಯ ಸಿಗುವುದಿಲ್ಲ. ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಪರೀಕ್ಷಾ ದಿನಾಂಕವನ್ನು ಪ್ರಕಟಿಸಬೇಕು ಎಂದು ರುಪ್ಸಾ ಒತ್ತಾಯಿಸಿದೆ.