ಮಸ್ಕಿ: ಶಾಲಾ ಆವರಣದಲ್ಲಿ ಕೊಳಚೆ ನೀರು, ಶಾಲೆಯತ್ತ ಮುಖಮಾಡದ ಮಕ್ಕಳು..!

Oct 27, 2021, 10:30 AM IST

ರಾಯಚೂರು(ಅ.27): ಶಾಲಾ ಆವರಣದಲ್ಲಿ ಕೊಳಚೆ ನೀರಿನಿಂದ ಮಕ್ಕಳು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿರುವಂತ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ. 20 ತಿಂಗಳ ಬಳಿಕ ಶಾಲೆ ಆರಂಭವಾದ್ರೂ ಕೂಡ ಅದೇ ಕಥೆ ಮುಂದುವರೆದಿದೆ. ಕೊಚಳೆಗೆ ಹೆದರಿ ಶಾಲೆಯತ್ತ ಮುಖಮಾಡುತ್ತಿಲ್ಲ ಮಕ್ಕಳು. ಪಟ್ಟಣದ ಸೋಮನಾಥ ನಗರದ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಯಾಗಿದೆ. ಶಾಲೆಯ ಆವರಣದ ತುಂಬ ಕೊಳಚೆ ನೀರಿದ್ದು ಪಾಚಿಗಟ್ಟಿದೆ. ಹೀಗಾಗಿ ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. 

ಕೆಆರ್‌ಎಸ್ ಭರ್ತಿ, ಪ್ರವಾಹದ ಎಚ್ಚರಿಕೆ, ನದಿ ಪಾತ್ರದ ಬಳಿ ತೆರಳದಂತೆ ಸೂಚನೆ