ಶಾಲಾ, ಕಾಲೇಜು ಪುನಾರಂಭ; ಇಂದು ಹೊರ ಬೀಳಲಿದೆ ಮಹತ್ವದ ತೀರ್ಮಾನ

Dec 19, 2020, 10:26 AM IST

ಬೆಂಗಳೂರು (ಡಿ. 19): ರಾಜ್ಯದಲ್ಲಿ ಶಾಲೆ ಮತ್ತು ಪಿಯು ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ವಿದ್ಯಾಗಮದ ಜೊತೆಗೆ ಶಾಲೆ, ಪಿಯು ಕಾಲೇಜು ಆರಂಭಿಸುವ ಬಗ್ಗೆ ಸಿಎಂ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಂಭವವಿದೆ. 

ಕೈ ಮುಗಿದು ಪ್ರಧಾನಿ ಮೋದಿ ಹೇಳಿದ 10 ಅಂಶಗಳೇನು; ರೈತರ ಪ್ರತಿಭಟನೆಗೆ ಸಿಗುತ್ತಾ ತಿರುವು?

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12.30 ಕ್ಕೆ ನಡೆವ ಸಭೆಯಲ್ಲಿ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್, ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜ. 01 ರಿಂದ 10, 12 ನೇ ತರಗತಿಗಳಿಗೆ ಪಾಠ ಶುರು ಮಾಡುವ ಬಗ್ಗೆ, ಜ. 15 ರಿಂದ 9, 11 ನೇ ಕ್ಲಾಸ್‌ ಪುನಾರಂಭಿಸುವ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.