Raichur Students: ಹಿಂದೂ-ಮುಸ್ಲಿಂ ಒಟ್ಟಾಗಿದ್ದೇವೆ, ಡ್ರೆಸ್ ಕೋಡ್‌ ಪಾಲಿಸಿದ ರಾಯಚೂರು ವಿದ್ಯಾರ್ಥಿನಿಯರು

Feb 19, 2022, 2:17 PM IST

ರಾಯಚೂರು(ಫೆ.19): ಹಿಜಾಬ್ ಕೇಸರಿ ಶಾಲು ವಿವಾದ (Hijab saffron shawl controversy) ನಡುವೆ ರಾಯಚೂರು (raichuru) ಮಾದರಿಯಾಗಿದೆ. ರಾಯಚೂರು ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೋರ್ಟ್ ಆದೇಶದಂತೆ ಹಿಜಾಬ್ ತೆಗೆದು ಎಲ್ಲರಂತೆ ತರಗತಿಗೆ ಆಗಮಿಸಿದ್ದಾರೆ. ನಾವೆಲ್ಲರೂ ಒಂದೇ ಎಂದು ಕೋರ್ಟ್ ನಿಯಮದಂತೆ ಹಿಜಾಬ್ ಬಿಟ್ಟು ಸಮವಸ್ತ್ರ ಧರಿಸಿ ಬಂಧಿಸಿದ್ದಾರೆ. ಈ ಮೂಲಕ ರಾಯಚೂರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು  (Govt Girls Pu College Raichur)ವಿದ್ಯಾರ್ಥಿಗಳು ಸಾಮರಸ್ಯ ಸಾರಿದ್ದಾರೆ.

Belagavi Hijab Row: ಹಿಜಾಬ್​ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಬೆಳಗಾವಿ ಕಾಲೇಜ್‌ ಅನಿರ್ದಿಷ್ಟಾವಧಿ ಬಂದ್

ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿಯರು (Students), ನಮ್ಮ ಕಾಲೇಜಿನಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ. ನಮ್ಮನ್ನು ಬೇರೆ ಮಾಡಬೇಡಿ. ಹಿಂದೂ-ಮುಸ್ಲಿಂ (Hindu- muslim) ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಎಲ್ಲರೂ ಒಂದೇ ರೀತಿಯ ಸಮವಸ್ತ್ರ ಧರಿಸಿಕೊಂಡು ಪಾಠ ಕೇಳುತ್ತೇವೆ ಎಂದು ವಿದ್ಯಾರ್ಥಿಯೊಬ್ಬಳು ಹೇಳಿದ್ದರೆ, ನಮ್ಮ ಕಾಲೇಜಿನಲ್ಲಿ ಹಿಜಾಬ್‌-ಕೇಸರಿ ಶಾಲು ವಿವಾದ ನಡೆದಿಲ್ಲ. ಹಿಜಾಬ್ (Hijab) ಹಾಕೊಂಡು ಬಂದವರಿಗೆ ಅದನ್ನು ತೆಗೆದು ತರಗತಿಗೆ ಬರಲು ಪ್ರತ್ಯೇಕ ಕೊಠಡಿ ಮೀಸಲಾಗಿಡಲಾಗಿದೆ ಎಂದು ಮತ್ತೋರ್ವ ವಿದ್ಯಾರ್ಥಿನಿ ಹೇಳಿದ್ದಾಳೆ.