Dec 30, 2021, 4:16 PM IST
ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳು ಅಂದ್ರೆ ಮೂಗುಮೂರಿಯುವರೇ ಹೆಚ್ಚು. ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯಗಳು ಇರಲ್ಲ. ಶಿಕ್ಷಕಿಯರು ಸಮಯಕ್ಕೆ ಬರಲ್ಲ. ಮಕ್ಕಳಿಗೆ ಪಾಠ ಮಾಡಲ್ಲವೆಂಬ ಹತ್ತಾರು ಆರೋಪಗಳು ಕೇಳಿಬರುತ್ತವೆ. ಆದ್ರೆ ಈ ಇಬ್ಬರು ಶಿಕ್ಷಕರು ಮಾತ್ರ ಜನರ ಆರೋಪ ಸುಳ್ಳು ಮಾಡಿದ್ದಾರೆ. ಕೊರೊನಾ ವೇಳೆಯಲ್ಲಿ ಸರ್ಕಾರ ಶಾಲೆಗಳಿಗೆ ರಜೆ ನೀಡಿತ್ತು. ಇಂತಹ ವೇಳೆಯಲ್ಲಿ ಸಿರವಾರ ತಾಲೂಕಿನ ಬುದ್ದಿನ್ನಿ ಗ್ರಾಮದ ಇಬ್ಬರು ಶಿಕ್ಷಕಿಯರು ನಮ್ಮ ಶಾಲೆಯೂ ಯಾವುದರಲ್ಲೂ ಕಮ್ಮಿ ಇರಬಾರದೆಂದು ಇಡೀ ಶಾಲೆಯೇ ಕಲಿಕಾ ಸಾಮಾಗ್ರಿಗಳಿಂದ ಅಲಂಕಾರಗೊಳಿಸಿದ್ದಾರೆ.
SSLC Examination 2022: ಇನ್ನೂ ಪ್ರಕಟವಾಗದ ಪರೀಕ್ಷಾ ದಿನಾಂಕ, ಒಮಿಕ್ರಾನ್ ಭೀತಿಯೇ?
ಬುದ್ದಿನ್ನಿ ಗ್ರಾಮದಲ್ಲಿ 1ರಿಂದ 5 ನೇ ತರಗತಿವರೆಗೆ 87 ಮಕ್ಕಳು ಇದ್ದು. ಗ್ರಾಮೀಣ ಪ್ರದೇಶದ ಮಕ್ಕಳು ಸಹ ಖಾಸಗಿ ಶಾಲೆಯಂತೆ ಕಲಿತಾ ಸಾಮಾಗ್ರಿಗಳ ಬಳಕೆ ಮಾಡಿ ಕಲಿಕೆ ಮಾಡಬೇಕು ಎಂಬ ಶಿಕ್ಷಕಿಯರ ಮಹಾದಾಸೆಯಿಂದ ಕೊರೊನಾ ವೇಳೆಯಲ್ಲಿ ಸಿಕ್ಕ ರಜೆ ವೇಳೆಯಲ್ಲಿ ತಮ್ಮ ಮನೆಯಲ್ಲಿ ಬಳಕೆ ಮಾಡಿ ವೆಸ್ಟ್ ಆಗಿ ಬಿಸಾಡುವ ಬಾಕ್ಸ್, ಸ್ಟ್ರಾ, ಹಳೆಯ ಪೇಪರ್ ಬಳಕೆ ಮಾಡಿ ನೂರಾರು ಕಲಿತಾ ಸಾಮಾಗ್ರಿಗಳು ತಯಾರಿಸಿದ್ದಾರೆ. ಈಗ ನಿತ್ಯವೂ ನಲಿ-ಕಲಿ ಕ್ಲಾಸ್ನಲ್ಲಿ ಮಕ್ಕಳಿಗೆ ಆ ಕಲಿಕಾ ಸಾಮಾಗ್ರಿಗಳ ಬಳಕೆ ಮಾಡಿ ಪಾಠ ಮಾಡುತ್ತಿದ್ದಾರೆ. ಮಕ್ಕಳು ಸಹ ಬಣ್ಣ -ಬಣ್ಣದ ಕಲಿಕಾ ಸಾಮಾಗ್ರಿಗಳು ನೋಡಿ ಖುಷಿ ಆಗುತ್ತಿದ್ದಾರೆ.