Nov 30, 2021, 3:20 PM IST
ಬೆಂಗಳೂರು (ನ. 30): ರಾಜ್ಯದಲ್ಲಿ ಕೊರೋನಾ ಕೇಸ್‌ಗಳು (Covid 19 Cases) ಹೆಚ್ಚಾಗುತ್ತಿದೆ. ಶಾಲಾ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟೀವ್ ಕೇಸ್‌ಗಳು ಪತ್ತೆಯಾಗುತ್ತಿದೆ. ಶಾಲೆಗಳನ್ನು ಬಂದ್ ಮಾಡುತ್ತಾರಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
Hassan: 2 ತಿಂಗಳಲ್ಲಿ 23 ಮಂದಿ ಕೊರೋನಾಗೆ ಬಲಿ, 21 ಮಂದಿ ಪಡೆದಿರಲಿಲ್ಲ!
'ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ಮುಚ್ಚುವ ಅಗತ್ಯ ಇಲ್ಲ. ಆನ್‌ಲೈನ್, ಆಫ್‌ಲೈನ್ ಎರಡಕ್ಕೂ ಅವಕಾಶ ಇರಲಿ. ಎಲ್ಲಾ ಕಡೆ ಲಸಿಕೆ ವೇಗ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಬಸ್, ರೈಲು, ಮೆಟ್ರೋ, ಸಾರ್ವಜನಿಕ ಪ್ರದೇಶಗಳಲ್ಲಿ 2 ಡೋಸ್ ಕಡ್ಡಾಯವಾಗಿರಬೇಕು. ತೆರೆದ ಪ್ರದೇಶದಲ್ಲಿ 500, ಒಳಾಂಗಣ ಪ್ರದೇಶದಲ್ಲಿ 200 ಮಂದಿಗೆ ಮಾತ್ರ ಅವಕಾಶ ಕೊಡುವಂತೆ ತಜ್ಞರ ಸಮಿತಿ, ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ (Dr. sudhakar) ನೇತೃತ್ವದಲ್ಲಿ ಸಭೆ ಮುಂದುವರೆದಿದೆ. ಸಂಪೂರ್ಣ ಚಿತ್ರಣ ಹೊರಬೀಳ ಬೇಕಿದೆ.