Hijab Row: ಹಿಜಾಬ್-ಕೇಸರಿ ಶಾಲಿನ ಬಗ್ಗೆ ಗೃಹ ಸಚಿವ ಆಗರ ಜ್ಞಾನೇಂದ್ರ ಖಡಕ್ ಪ್ರತಿಕ್ರಿಯೆ

Feb 3, 2022, 3:27 PM IST

ಬೆಂಗಳೂರು(ಫೆ.03): ಶಾಲೆಗಳು ಯಾರೂ ಹಿಜಾಬ್ ಧರಿಸಬಾರದು ಹಾಗೂ ಕೇಸರಿ ಶಾಲುಗಳನ್ನು ಹಾಕಬಾರದು. ಶಾಲೆಗಳು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆಯನ್ನು ಮೂಡಿಸುತ್ತವೆ. ನಮಗೆ ನಮ್ಮ ಧರ್ಮಗಳನ್ನು ಪ್ರಾರ್ಥನೆಗಳನ್ನು ಮಾಡಲು ದೇವಸ್ಥಾನ, ಚರ್ಚ್‌ ಹಾಗೂ ಮಸೀದಿಗಳಿವೆ. ಆದರೆ ಈ ಗೊಂದಲಗಳನ್ನು ಶಾಲೆಯೊಳಗೆ ತರಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ (School Uniform Compulsory ) ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಶಾಲೆಗಳಿಗೆ ಎಲ್ಲಾ ಧರ್ಮದ ಮಕ್ಕಳು ಓದಲು ಬರುತ್ತಾರೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಪಡೆಯಲು ಸಮವಸ್ತ್ರವು ನೆರವಾಗಲಿದೆ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

Online Education Apps: ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

ಮಕ್ಕಳು ಈ ರೀತಿಯ ಹಿಜಾಬ್ (Hijab) ಹಾಗೂ ಕೇಸರಿ ಶಾಲು (Saffron Shawls) ಧರಿಸಿ ಬರುವುದರ ಹಿಂದಿರುವ ಮತೀಯ ಶಕ್ತಿಗಳ ಬಗ್ಗೆ ಗಮನ ಕೊಡಲು ನಾನು ಈಗಾಗಲೇ ಪೊಲೀಸರಿಗೆ ಸೂಚಿಸಿದ್ದೇನೆ. ಈ ದೇಶದ ಐಕ್ಯತೆಗೆ ಧಕ್ಕೆ ತರುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.