SSLC Exam:ಸಮವಸ್ತ್ರ ಧರಿಸಿ ಬನ್ನಿ, ಹಿಜಾಬ್ ಧರಿಸಿದರೆ ಪ್ರವೇಶವಿಲ್ಲ: ನಾಗೇಶ್

Mar 28, 2022, 9:31 AM IST

ಹಿಜಾಬ್ (Hijab) ಮತ್ತು ಪರೀಕ್ಷೆ  (SSLC Exam) ಧರ್ಮಸಂಕಟದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸಿಲುಕಿದ್ದಾರೆ. ಇತ್ತ ಹಿಜಾಬ್ ಬೇಕು, ಅತ್ತ ಪರೀಕ್ಷೆಯೂ ಬೇಕು. ಆದರೆ ಒಂದು ಆಯ್ಕೆಗೆ ಮಾತ್ರ ಅವಕಾಶವಿದೆ. ಪರೀಕ್ಷೆ ಬೇಕೆಂದರೆ ಹಿಜಾಬ್ ತೆಗೆಯಲೇಬೇಕು. 

SSLC Exam:ಹಿಜಾಬ್‌ಗಾಗಿ ಪರೀಕ್ಷೆ, ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ಮೌಲಾನ ಶಾಹುಲ್ ಹಮೀದ್ ಮನವಿ

ಹಿಜಾಬ್ ವಿಚಾರವಾಗಿ ಸರ್ಕಾರದ ನಿಯಮ ಪಾಲಿಸಲೇಬೇಕು. ಹಿಜಾಬ್ ಧರಿಸಿ ಬಂದರೆ ಅವಕಾಶವಿಲ್ಲ. ಇದೇ ವಿಚಾರಕ್ಕೆ ಪರೀಕ್ಷೆಗೆ ಗೈರಾದರೆ ಮತ್ತೆ ಅವಕಾಶ ಕೊಡುವುದಿಲ್ಲ. ಮಕ್ಕಳೆಲ್ಲರೂ ಧೈರ್ಯವಾಗಿ ಪರೀಕ್ಷೆ ಎದುರಿಸಿ. ವಿದ್ಯಾರ್ಥಿ ಸ್ನೇಹಿ ಪ್ರಶ್ನೆ ಪತ್ರಿಕೆ ಇರುತ್ತದೆ, ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್‌' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.