May 31, 2022, 3:49 PM IST
ಬೆಂಗಳೂರು (ಮೇ.31): ಕರ್ನಾಟಕದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ (Textbook revision) ವಿವಾದ ತಾರಕಕಕ್ಕೇರಿದೆ. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳನ್ನ ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ
9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ -1 ರಲ್ಲಿ ಬಸವಣ್ಣನವರ ಪಾಠದಲ್ಲಿ ಕೆಲ ಅಂಶ ತೆಗೆದುಹಾಕಲಾಗಿದೆ. ಇದರಿಂದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳುಬಾಳು ಶಾಖಾಮಠದ ಸಾಣೇಹಳ್ಳಿಯ ಪಂಡಿತಾರಾದ್ಯ ಶ್ರೀಗಳು (Sri Panditharadhya Swamiji ) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಂಡಿತಾರಾದ್ಯ ಶ್ರೀಗಳು ಪತ್ರ ಬರೆದಿದ್ದು, ಪಠ್ಯ ಪುಸ್ತಕವನ್ನ ತಡೆಹಿಡಿದು ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ.