Jan 17, 2022, 11:31 AM IST
ಬೆಂಗಳೂರು (ಜ. 17): ದಿನೇ ದಿನೇ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಶಾಲೆಗಳಲ್ಲೂ ಸೋಂಕು ಹೆಚ್ಚಾಗಿದ್ದು ಮಕ್ಕಳಲ್ಲಿ, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಶಾಲೆ ಬಂದ್ ಮಾಡಿ ಆದೇಶ ನೀಡಲಾಗಿದೆ.
ಸೋಂಕು ಹೆಚ್ಚಾಗಿರುವ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು, ಬಳ್ಳಾರಿ, ಬೆಳಗಾವಿ, ಧಾರವಾಡಗಳಲ್ಲಿ ಶಾಲೆ ಬಂದ್ ಆಗಿದೆ. ಬಂದ್ ಆಗಿರುವ ಶಾಲೆಗಳನ್ನು ತೆರೆಯುವಂತೆ ರುಪ್ಸಾ ಸರ್ಕಾರಕ್ಕೆ ಮನವಿ ಮಾಡಿದೆ.