Feb 24, 2022, 3:49 PM IST
ಉಡುಪಿ (ಫೆ.24): ಫೆಬ್ರವರಿ 28 ರಿಂದ ಆರಂಭವಾಗಲಿರುವ ತಮ್ಮ ಪ್ರಾಯೋಗಿಕ ಪರೀಕ್ಷೆಯನ್ನು (practical examination) ಮುಂದೂಡುವಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯಲ್ಲಿ (Department Of Pre-University Education Karnataka) ಮನವಿ ಮಾಡುವುದಾಗಿ ಹಿಜಾಬ್ ಪ್ರಕರಣದಲ್ಲಿ (Hijab case) ಹೈಕೋರ್ಟ್ (High court) ಮೆಟ್ಟಿಲೇರಿರುವ ಉಡುಪಿ (Udupi) ಸರ್ಕಾರಿ ಪಿಯು ಕಾಲೇಜಿನ (Government PU college) ಆರು ವಿದ್ಯಾರ್ಥಿನಿಯರು (Students) ಹೇಳಿದ್ದಾರೆ.
ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರಿಂದ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ ಮನವಿ
ಹಿಜಾಬ್ ಧರಿಸಿ ತರಗತಿ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ ನಂತರ ಕಳೆದ ಎರಡು ತಿಂಗಳಿನಿಂದ ತರಗತಿಗೆ ಹಾಜರಾಗಿಲ್ಲ. ಅಧ್ಯಯನ ಮತ್ತು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ನಮಗೆ ಸಮಯದ ಅಗತ್ಯವಿದೆ. ಆದ್ದರಿಂದ ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತೇವೆ ಎಂದು ಆರು ವಿದ್ಯಾರ್ಥಿನಿಯರ ಪೈಕಿ ಒಬ್ಬರಾದ ಅಲ್ಮಾಸ್ ತಿಳಿಸಿದರು.