Udupi MGM College Hijab Controversy: ಎಂಜಿಎಂ ಕಾಲೇಜಿನಲ್ಲಿ ಎಚ್ಚೆತ್ತ ಆಡಳಿತ ಮಂಡಳಿ, ಸದ್ಯಕ್ಕೆ ತಣ್ಣಗಾದ ಹಿಜಾಬ್ ವಿವಾದ

Feb 7, 2022, 8:17 PM IST

ಉಡುಪಿ (ಫೆ.7): ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ  ಆರಂಭವಾದ ಹಿಜಾಬ್ (Hijab) ಹಾಗೂ ಕೇಸರಿ ಶಾಲು (Saffron Shawl) ವಿವಾದ ಇದೀಗ ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ.  ಇದೀಗ ಜಿಲ್ಲೆಯ ಮತ್ತೊಂದು ಪ್ರತಿಷ್ಠಿತ  ಕಾಲೇಜಿನಲ್ಲೂ ಈ ವಿವಾದ ಕಾಣಿಸಿಕೊಂಡಿದೆ.  ಎಂಜಿಎಂ (Mahatma Gandhi Memorial College ) ಕಾಲೇಜು ಆಡಳಿತ ಮಂಡಳಿ ಮಂಗಳವಾರದಿಂದ ಹಿಜಾಬ್ ಧರಿಸಿ ಬರದಂತೆ ಆದೇಶಿಸಿದ್ದು, ಇದಕ್ಕೆ ವಿದ್ಯಾರ್ಥಿನಿಯರು ಒಪ್ಪಿಗೆ ಸೂಚಿಸಿದ್ದಾರೆ. ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ಉಳಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಾಗಿ ಎಚ್ಚರಿಕೆ ನೀಡಿದ್ದಾರೆ. 

Thirthahalli Hijab Row: ಗೃಹ ಸಚಿವರ ತವರು ತೀರ್ಥಹಳ್ಳಿ ಸರಕಾರಿ ಕಾಲೇಜಿಗೆ ತಲುಪಿದ ಹಿಜಾಬ್ ವಿವಾದ

ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿರುವುದಕ್ಕೆ ಬಾಕಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು ಈ ಹಿನ್ನೆಲೆಯಲ್ಲಿ ತಕ್ಷಣ ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ. ವಸ್ತ್ರ ಸಂಹಿತೆ ಬಗ್ಗೆ ಸರ್ಕಾರದ ಆದೇಶ ಕುರಿತು ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದೆ ಎನ್ನಲಾಗಿದೆ.