Oct 9, 2021, 5:14 PM IST
ಬೆಂಗಳೂರು (ಅ. 09): ಏಷ್ಯಾನೆಟ್ ಸುವರ್ಣ ನ್ಯೂಸ್ 'ಹಲೋ ಮಿನಿಸ್ಟರ್' ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇಂದು ಆಗಮಿಸಿದ್ದರು. ನಾಗೇಶ್ ಅವರು ತಿಪಟೂರಿನವರು. ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರು. ಎಬಿವಿಪಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2008 ರಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅಲ್ಲಿಂದ ಅವರ ರಾಜಕೀಯ ಜೀವನ ಶುರುವಾಯಿತು.
ಶಿಕ್ಷಣ ಇಲಾಖೆಯ ವಿಚಾರಗಳು, ಫೀಸ್ ವಿಚಾರ, ಶಿಕ್ಷಕರ ದೂರುಗಳು, ನೇಮಕಾತಿ, ಶಾಲಾ ಪುನಾರಂಭದ ಬಗ್ಗೆ ಮಾತನಾಡಿದ್ದಾರೆ.