Jun 7, 2022, 12:41 PM IST
ಬೆಂಗಳೂರು(ಜೂ.07): ಸಿಇಟಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಕಣ್ಣೀರು ಇಡುತ್ತಿದ್ದಾರೆ. ಈ ಮೂಲಕ ಇಂಜಿನಿಯರಿಂಗೆ ಕನಸು ಕಂಡಿದ್ದ ವಿದ್ಯಾರ್ಥಿಗಳು ತೀವ್ರ ನಿರಾಸೆಯಾಗಿದೆ. ಪರೀಕ್ಷೆ ಪೀಸ್ ಪಾವತಿ ಮಾಡಿದ್ರೂ ಕೂಡ ಹಾಲ್ ಟಿಕೆಟ್ ಸಿಗ್ತಿಲ್ಲ. ಹಾಲ್ ಟಿಕೆಟ್ ಡೌನ್‌ಲೋಡ್ ಆಗ್ತಿಲ್ಲ ಅಂತ ವಿದ್ಯಾರ್ಥಿಗಳು ಕಣ್ಣೀರು ಇಡುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳು ಉದ್ಬವವಾಗಿದ್ರೂ ಕೂಡ ಯಾರೂ ಕೂಡ ಸ್ಪಂದಿಸುತ್ತಿಲ್ಲ ಅಂತ ಪೋಷಕರು ಆರೋಪಿಸಿದ್ದಾರೆ.