Sep 29, 2020, 12:41 PM IST
ಬೆಂಗಳೂರು (ಸೆ. 29): ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ಶುರುವಾಗಿದೆ. ಶಾಲಾ- ಕಾಲೇಜುಗಳನ್ನು ಆರಂಭಿಸಿ ಬಿಡೋಣ ಎನ್ನುವ ಮನೋಭಾವದಲ್ಲಿದೆ ಸರ್ಕಾರ. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ, ಪೋಷಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಇನ್ನೂ ಮೂರು ತಿಂಗಳು ಶಾಲೆ ಪುನಾರಂಭ ಬೇಡ, ನಾವು ಕಳ್ಸೋದು ಇಲ್ಲ: ಪೋಷಕರ ಒತ್ತಾಯ
ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ನಿಗಾ ವಹಿಸೋದು ಕಷ್ಟ. ಈಗ ಯುವಜನತೆಯಲ್ಲಿಯೂ ಕೋವಿಡ್ ಹೆಚ್ಚಾಗುತ್ತಿದೆ. ಅಂತದ್ರಲ್ಲಿ ಮಕ್ಕಳಲ್ಲೂ ಹೆಚ್ಚಾಗತೊಡಗಿದರೆ ಅದನ್ನು ನಿಯಂತ್ರಿಸೋದು ತುಂಬಾ ಕಷ್ಟ. ಹಾಗಾಗಿ ಸರ್ಕಾರ ಆತುರಪಡೋದು ಬೇಡ. ಇನ್ನಷ್ಟು ಸಮಯ ತೆಗೆದುಕೊಂಡು ಆ ನಂತರ ಶುರು ಮಾಡೋದು ಒಳ್ಳೆಯದು ಎಂದು ಟಾಸ್ಕ್‌ಫೋರ್ಸ್ ಸದಸ್ಯೆ ಡಾ. ಲಲಿತಾ ಸುವರ್ಣ ಜೊತೆ ಮಾತನಾಡಿದ್ದಾರೆ.