Mar 21, 2022, 6:48 PM IST
ಬೆಂಗಳೂರು (ಮಾ.21): ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ (medical education) ಶುಲ್ಕದ ಬಗ್ಗೆ ವಿಧಾನಪರಿಷತ್ ನಲ್ಲಿ ಜಟಾಪಟಿ ನಡೆದಿದೆ. ಮೆಡಿಕಲ್ ಶಿಕ್ಷಣ ಕರ್ನಾಟಕದಲ್ಲಿ ಮಾತ್ರ ದುಬಾರಿಯಲ್ಲ. ಜಗತ್ತಿನಲ್ಲೇ ಅತ್ಯಂತ ದುಬಾರಿ ಶಿಕ್ಷಣ ಮೆಡಿಕಲ್ ಆಗಿದೆ. ನೀಟ್ ಪರೀಕ್ಷೆ ನಡೆಸಿ ಸೀಟು ಗಿಟ್ಟಿಸಿಕೊಳ್ಳುವುದು
ಕೇಂದ್ರದ ನಿಯಮ. ರ್ಯಾಂಕ್ ಪಡೆದವರು ತಮ್ಮ ಇಷ್ಟದ ಕಾಲೇಜುಗಳಲ್ಲಿ ಓದಬಹುದು. ಮೆರಿಟ್ ಗೆ ಅನುಸಾರವಾಗಿ ಸೀಟು ದೊರಕಿದೆ ಸಮಸ್ಯೆಯಾಗಿಲ್ಲ ಎಂದು ಸಚಿವ ಡಾ.ಸುಧಾಕರ್ (dr k sudhakar) ಅವರು ಕಾಂಗ್ರೆಸ್ ನ (Congress) ಯುಬಿ ವೆಂಕಟೇಶ್ (UB Venkatesh) ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
Karnataka Medical Fees: ವೈದ್ಯಕೀಯ ಶಿಕ್ಷಣ ಶುಲ್ಕ ಇಳಿಸಲು ರಾಜ್ಯ ಸರ್ಕಾರ ತೀರ್ಮಾನ
ಸದ್ಯ ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.