ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಲಂಚ ಇಲ್ಲದೇ ಕೆಲಸವೇ ಆಗಲ್ಲ...!

Jan 9, 2021, 3:53 PM IST

ಬೆಂಗಳೂರು (ಜ. 09): ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಯಾವ ರೀತಿ ಇದೆ ಅನ್ನೋದಕ್ಕೆ ಇದೇ ಉದಾಹರಣೆ ನೋಡಿ.  ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಹೆಣ್ಣು ಮಗಳೊಬ್ಬಳು ಕೌಟುಂಬಿಕ ಕಾರಣಕ್ಕಾಗಿ ಮತ್ತೊಂದು ಕಡೆ ವರ್ಗಾವಣೆಗೆ ಕೇಳುತ್ತಾಳೆ.

ಯುವರಾಜ್ ಹೇಳಿದ್ದ ಭವಿಷ್ಯವು ಸಾಕಷ್ಟು ಬಾರಿ ಸತ್ಯವಾಗಿದೆಯಂತೆ! ಇಲ್ಲೇ ಎಡವಟ್ಟು ಮಾಡ್ಕೊಂಡ್ರಾ ಸ್ವೀಟಿ..?

ಲೋಕಲ್ ಎಂಎಲ್‌ಎ ಯಿಂದ ಶಿಫಾರಸ್ಸು ಪತ್ರ ಪಡೆದುಕೊಂಡು ಕಚೇರಿಗೆ ಅಲೆದಾಡಿದ್ರೂ, ವರ್ಗಾವಣೆ ಮಾತ್ರ ಆಗುವುದಿಲ್ಲ. ಕೊನೆಗೆ ಹೈರಾಣಾಗಿ ಹೋದ ಶಿಕ್ಷಕಿ ಕವರ್ ಸ್ಟೋರಿಗೆ ಪತ್ರ ಬರೆಯುತ್ತಾರೆ. ಆ ಪತ್ರವನ್ನು ಇಟ್ಟುಕೊಂಡು ಕವರ್ ಸ್ಟೋರಿ ತಂಡ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗೆ ಭೇಟಿ ಕೊಟ್ಟಾಗ ಅಲ್ಲಿ ನಡೆಯುವ ಲಂಚಾವತಾರ ಬಯಲಿಗೆ ಬರುತ್ತದೆ. ಇಲ್ಲಿ ಲಂಚ ಇಲ್ಲದೇ ಒಂದು ಫೈಲ್ ಕೂಡಾ ಮೂವ್ ಆಗಲ್ಲ. ಕವರ್ ಸ್ಟೋರಿ ತಂಡ ಇಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಲಂಚಾವತಾರ ಬಯಲಾಗಿದೆ.