ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪ್ರಶ್ನೆಗಳು ಲೀಕ್.? ದೂರಿನ ಬಳಿಕ ಎಚ್ಚೆತ್ತ KEA

Apr 24, 2022, 1:30 PM IST

ಬೆಂಗಳೂರು (ಏ. 24): ಕನ್ನಡ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.  ವಾಟ್ಸಾಪ್ ಮೂಲಕ ಪ್ರಶ್ನೆಗಳು ಲೀಕ್ ಆಗಿರುವ ಆರೋಪ ಕೇಳಿ ಬಂದಿದೆ. 

ಮಾರ್ಚ್ 14 ರಂದು ನಡೆದಿದ್ದ ಭೂಗೋಳ ಶಾಸ್ತ್ರ ಪರೀಕ್ಷೆಯಲ್ಲಿ, 35 ಸಾವಿರ ವಿದ್ಯಾರ್ಥಿಗಳು ಬರೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ದೂರು ನೀಡಿದ್ದಾರೆ. ತನಿಖೆ ನಡೆಸುವಂತೆ ಸಿಎಂಗೂ ಮನವಿ ಮಾಡಿದ್ದಾರೆ.