Feb 11, 2022, 12:14 PM IST
ತುಮಕೂರು (ಫೆ. 11): ತಾವು ಓದಿದ ಮಧುಗಿರಿ ಸರ್ಕಾರಿ ಶಾಲೆಗೆ (Madhugiri Govt School) ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಭೇಟಿ ನೀಡಿ, ಶಾಲಾ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆಗೆ ಕಂಪ್ಯೂಟರ್, ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಟ್ಯಾಬ್ ವಿತರಿಸಿದ್ದಾರೆ.
'ನಾವು ಓದುವಾಗ ಮೂಲಸೌಕರ್ಯ ಇರಲಿಲ್ಲ. ನೀವು ಅದೃಷ್ಟವಂತರು. ಮೂಲಭೂತ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.