Aug 28, 2020, 5:04 PM IST
ಬಾಗಲಕೋಟೆ (ಆ. 28): ವಿದ್ಯಾರ್ಥಿಗಳಿಗೆ ಈಗ ಆನ್‌ಲೈನ್‌ನಲ್ಲೇ ತರಗತಿಗಳನ್ನು ನಡೆಸಲಾಗುತ್ತಿದ್ದು ಎಷ್ಟೋ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಲಾಗದೇ ಒದ್ದಾಡಿರುವುದನ್ನು ನೋಡಿದ್ದೇವೆ. ಸರ್ಕಾರ ಏನೋ ಆನ್‌ಲೈನ್ ಕ್ಲಾಸ್ ಅಂತ ಶುರು ಮಾಡಲು ಸೂಚನೆ ನೀಡಿತು. ಆದರೆ ಮಕ್ಕಳಿಗೆ ಮೊಬೈಲ್ ಸೌಲಭ್ಯ ಇದೆಯಾ, ಕರೆಂಟ್ ಇದೆಯಾ, ಇಂಟರ್‌ನೆಟ್ ಇದೆಯಾ ಎಂಬುದನ್ನು ಮರೆತು ಬಿಟ್ಟಿತು.
ಬಡತನದ ಮಧ್ಯೆ ಆನಲೈನ್ ಕ್ಲಾಸ್ ಕೇಳೋಕೆ ಮೊಬೈಲ್ ತೆಗೆದುಕೊಳ್ಳಲು ಬಾಗಲಕೋಟೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸವಿತಾ ಮುದಬಾವಿ ಕಷ್ಟಪಡುತ್ತಿದ್ದಳು. ಅಕ್ಕಪಕ್ಕದ ಮನೆಯವರ ಪುಸ್ತಕ ಪಡೆದು ಓದುತ್ತಿದ್ದಳು. ಈಕೆಯ ಆನ್‌ಲೈನ್ ಗೋಳಿನ ಕಥೆ ಕುರಿತು ಸುವಣ೯ನ್ಯೂಸ್ ವರದಿ ಮಾಡಿದ್ದೇ ತಡ, ನಗರದ ಈಟಿ ಫೌಂಡೇಶನ್ ಅಕೆಯ ಮನೆಯವರೆಗೂ ಬಂದು ಮೊಬೈಲ್ ನೆರವು ನೀಡಿದೆ. ಇಡೀ ಕುಟುಂಬ ಭಾವುಕರಾಗಿ ಸುವಣ೯ನ್ಯೂಸ್ ಗೆ ಕೈ ಮುಗಿದು ಧನ್ಯವಾದ ಅಪಿ೯ಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಶಿಕ್ಷರಿಗಾಗಿ ಬಂತು 'ಶಿಕ್ಷಕ ಮಿತ್ರ' ಅಪ್ಲಿಕೇಶನ್: ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ..!