May 17, 2020, 7:54 PM IST
ಧಾರವಾಡ (ಮೇ.17): ಮೊದಲೇ ಲಾಕ್‌ಡೌನ್‌ನಿಂದ ಜನ ಹೈರಾಣಾಗಿದ್ದಾರೆ. ಕೈಯಲ್ಲಿ ಕಾಸಿಲ್ಲ, ಕೆಲವಿಲ್ಲ. ಹೀಗಿರುವಾಗ ಒಂದೊಂದು ರೂಪಾಯಿ ಅಷ್ಟೇ ಮುಖ್ಯ, ಇದರ ನಡುವೆ ಕೆಲ ಪೆಟ್ರೋಲ್ ಬಂಕ್ ಗ್ರಾಹಕರಿಗೆ ಮೋಸ ಮಾಡುತ್ತಿದೆ. ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಪೆಟ್ರೋಲ್ ಪಂಪ್‌ನಲ್ಲಿ ಮೀಟರ್ ಒಡುತ್ತಿದೆ. ಆದರೆ ಪೆಟ್ರೋಲ್ ಮಾತ್ರ ಬರಲ್ಲ. ವೀಡಿಯೋ ಚಿತ್ರೀಕರಿಸಿದ ಮೋಸವನ್ನು ಗ್ರಾಹಕರು ಬಯಲು ಮಾಡಿದ್ದಾರೆ. ಇಷ್ಟೇ ಅಲ್ಲ ಸಾರ್ವಜನಿಕರಿಂದ ಪಂಪ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.