ಮಂಗಳೂರಿನಲ್ಲಿ ಝುಲೆಕಾ ಯೆನೆಪೋಯಾ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆ!

Jun 14, 2022, 8:06 PM IST

ಮಂಗಳೂರು(ಜೂ.14): ಟಾಟಾ ಟ್ರಸ್ಟ್ ಸಹಕಾರದಲ್ಲಿ ಮಂಗಳೂರಿನ ಝುಲೆಕಾ ಯೆನಪೊಯ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಯಾಗಿದೆ. ಝುಲೆಕಾ ಯೆನಪೊಯ ಕ್ಯಾನ್ಸರ್ ಆಸ್ಪತ್ರೆಯನ್ನು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರೆ, ಯೆನಪೋಯ ಕೇಂದ್ರದಲ್ಲಿನ ಅತ್ಯಾಧುನಿಕ ಅಂಕೋಲಜಿ ಘಟಕವನ್ನು ಶಾಸಕ ಯುಟಿ ಖಾದರ್ ಉದ್ಘಾಟಿಸಿದ್ದಾರೆ. ಮುಂಬೈ ಹಾಗೂ ಬೆಂಗಳೂರು ಹೊರತು ಪಡಿಸಿದರೆ ಈ ಅತ್ಯಾಧುನಿಕ ಆರೋಗ್ಯ ಸೌಲಭ್ಯ ಇದೀಗ ಮಂಗಳೂರಿನಲ್ಲಿ ಲಭ್ಯವಾಗಿದೆ.