Jun 5, 2022, 8:01 PM IST
ಚಿಕ್ಕಮಗಳೂರು, (ಜೂನ್.05): ಪ್ರೀತಿಸಿದ ಹುಡುಗ ಕೈಕೊಟ್ಟ ಅಂತ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳನ್ನ ಅದೆಷ್ಟೋ ನೋಡಿದ್ದೇವೆ. ಆದ್ರೆ, ಇವತ್ತು ಹುಡುಗಿ ಕೈಕೊಟ್ಟಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಕಥೆಯನ್ನ ಹೇಳಹೊರಟಿದ್ದೇವೆ. ಅದು ಒಂದು ದಶಕದ ಪ್ರೀತಿ. ಇಬ್ಬರೂ 10 ವರ್ಷಗಳ ಕಾಲ ಜೊತೆಯಲ್ಲಿ ಓಡಾಡಿ. ನಿನಗೆ ನಾನು, ನನಗೆ ನೀನು ಅಂತ ತಮ್ಮದೇ ಲೋಕದಲ್ಲಿ ವಹರಿಸಿದ್ರು.
ಪ್ರೀತಿಸಿ ಕೈಕೊಟ್ಟ ಹುಡುಗಿ, ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ
ಆದ್ರೆ ಯಾವಾಗ ಮದುವೆ ವಿಷ್ಯ ಬಂತೋ ಹುಡುಗಿ ಉಲ್ಟಾ ಹೊಡೆದುಬಿಟ್ಟಿದ್ದಾಳೆ. 10 ವರ್ಷದ ಪ್ರೀತಿ ಹೀಗೆ ಅಂತ್ಯ ಆಗಿಬಿಡ್ತಲ್ಲ ಅನ್ನೋ ಕೊರಗು ಹುಡುಗನಿಗೆ ಶುರುವಾಗಿಬಿಡುತ್ತೆ. ಆಕೆಯನ್ನ ಬಿಟ್ಟಿರಲಾರದೇ ಕೊನೆಗೆ ಸಾಯಲು ಕೂಡ ನಿರ್ಧಾರ ಮಾಡಿಬಿಡ್ತಾನೆ. ಆದ್ರೆ ಆತ ಸುಮ್ಮನೆ ಸಾಯೋದಿಲ್ಲ. ಕೈಕೊಟ್ಟವಳಿಗೆ ಬುದ್ಧಿ ಕಲಿಸಲೆಂದೇ ಒಂದು ಡೆತ್ ನೋಟ್ ಬರೆದಿಡ್ತಾನೆ. ಆತ ಬರೆದ ಡೆತ್ ನೋಟ್ನಲ್ಲಿ ಏನಿತ್ತು..? ದಶಕದ ಪ್ರೀತಿ ಹೇಗೆ ಮಣ್ಣು ಸೇರಿತು ಎನ್ನುವ ದಾರುಣ ಕಥೆಯೇ ಇವತ್ತಿನ ಎಫ್.ಐ.ಆರ್....................