Aug 22, 2022, 4:43 PM IST
ಬೆಂಗಳೂರು, (ಆಗಸ್ಟ್.22): ವಿಲ್ಹಿಂಗ್‌ಗೆ ಬ್ರೇಕ್ ಹಾಕಲು ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರು ಯುವಕರ ಪುಡಾಟ ಮಾತ್ರ ನಿಲ್ಲುತ್ತಿಲ್ಲ.ಹೌದು....ಬೆಂಗಳೂರಿನಲ್ಲಿ ಪುಂಡರ ವಿಲ್ಹಿಂಗ್ ಪುಂಡಾಟಿಕೆ ಮುಂದುವರೆದಿದೆ.
ವ್ಹೀಲಿಂಗ್ ಶೋಕಿ ವೇಳೆ ಮಹಿಳೆಗೆ ಗುದ್ದಿದ ಪುಂಡರು!
ಕೈಯಲ್ಲಿ ಡ್ರ್ಯಾಗರ್ ಹಿಡಿದು ವಿಲ್ಹಿಂಗ್ ಮಾಡಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ್ದಾರೆ. ಹುಡುಗಿಯನ್ನು ಹಿಂದೆ ಕೂರಿಸಿಕೊಂಡು ವಿಲ್ಹಿಂಗ್ ಮಾಡಿದ್ದಾನೆ. ವಿಲ್ಹಿಂಗ್ ಮಾಡಲು ಯುವತಿ ಸಹ ಸಾಥ್ ನೀಡಿದ್ದಾಳೆ.