Jun 27, 2020, 1:26 PM IST
ಕಲಬುರಗಿ(ಜೂ.27): ತಡರಾತ್ರಿ ಮನೆಯಂಗಳದಲ್ಲಿ ಓದುತ್ತಿದ್ದ SSLC ವಿದ್ಯಾರ್ಥಿನಿಯನ್ನು ಮುಂಬೈನಿಂದ ಬಂದ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಕಲಬುರ್ಗಿ ಜಿಲ್ಲೆಯ ಹೊನಬಟ್ಟಿ ತಾಂಡದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೂರು ದಿನದ ಹಿಂದೆ ರಾಮ್ ಚೌಹ್ಹಾಣ್ ಎನ್ನುವ ವ್ಯಕ್ತಿ ಅತ್ಯಾಚಾರ ಮಾಡಲು ಯತ್ನಿಸಿದ ನೀಚ. ಬಾಲಕಿಯ ಬಾಯಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದಿದ್ದಾನೆ. ಬಾಲಕಿ ಕೂಗಿಕೊಂಡಾಗಿ ಸ್ಥಳೀಯರು ಓಡಿ ಬಂದು ಬಚಾವು ಮಾಡಿದ್ದಾರೆ.
ಹಳೆ ವಿಡಿಯೋ ನಮ್ಮತ್ರ ಇದೆ, ಅಪ್‌ಲೋಡ್ ಮಾಡುತ್ತೇವೆ' ಖ್ಯಾತ ನಟಿಗೆ ಬ್ಲ್ಯಾಕ್ ಮೇಲ್!
ಜೂನ್ 24ರ ರಾತ್ರಿ SSLC ಪರೀಕ್ಷೆಗಾಗಿ ವಿದ್ಯಾರ್ಥಿನಿ ಮನೆಯಂಗಳದಲ್ಲಿ ಓದುತ್ತಿದ್ದಳು.ಮರುದಿನ ಪರೀಕ್ಷೆ ಇದ್ದರೂ ಆ ಬಾಲಕಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಈಗ ರಾಮ್ ಚೌಹ್ಹಾಣ್ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.