ಯಾದಗಿರಿ: ಆಯುಷ್ ವೈದ್ಯನ ಕಳ್ಳಾಟ ಬಯಲು

Sep 4, 2021, 8:58 PM IST

ಯಾದಗಿರಿ, (ಸೆ.04): ಇಂದಿಗೂ ಒಂದೇ ಒಂದು ವೈದ್ಯರಿಲ್ಲದ ಅದೆಷ್ಟೋ ಕುಗ್ರಾಮಗಳಿವೆ. ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಗೂ ವೈದ್ಯರನ್ನು ಭೇಟಿಯಾಗ್ಬೇಕಾದ್ರೆ ಅದೆಷ್ಟೋ ಕಿ.ಮೀ ಪ್ರಯಾಣ ಬೆಳೆಸ್ಬೇಕು.  ಇಂಥ ಸನ್ನಿವೇಶದಲ್ಲಿ ಊರಲ್ಲಿ ಕ್ಲಿನಿಕ್‌ವೊಂದು ಓಪನ್ ಆದ್ರೆ ಜನಗಳಿಗೆ ಅದೆಷ್ಟೋ ಸಮಾಧಾನ ಸಿಗುತ್ತೆ ಅಂತಾ ನಾವು ಊಹಿಸ್ಬಹುದು. ಪಾಪ ಆ ಹಳ್ಳಿ ಜನ, ಆ ವೈದ್ಯನ ಡಿಗ್ರಿಯಾಗಲಿ ಆತನ ಅನುಭವವಾಗಲಿ ಏನೂ ನೋಡಲ್ಲ. 

ಲಸಿಕೆ ನೀಡಲು ಬಂದ ಆರೋಗ್ಯ ಸಿಬ್ಬಂದಿ ಕುಡುಕನ ಕಾಟದಿಂದ ಬೇಸತ್ತು ವಾಪಸ್.!

ಕೊರಳಲ್ಲಿ ಸೆತಸ್ಕೋಪ್ ಇದ್ರೆ ಸಾಕು, ಡಾಕ್ಟ್ರು ಅಂತಾ ಭಾವಿಸ್ತಾರೆ. ಆದರೆ ಹಳ್ಳಿಜನರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಲಾಭ ಪಡೆಯಲು ಅದೆಷ್ಟೋ ಮಂದಿ ಹೊಂಚುಹಾಕೋದು ಕೂಡಾ ಅಷ್ಟೇ ಸಾಮಾನ್ಯ.  ಆದರೆ ಕೆಲವೊಮ್ಮೆ ಅದೆಂತಹ ಅನಾಹುತಗಳಿಗೆ ಕಾರಣವಾಗುತ್ತೆ ಎಂಬುವುದಕ್ಕೆ ಈ ವೈದ್ಯನ ಕಹಾನಿಯೇ ನಿದರ್ಶನ.