Nov 12, 2024, 5:59 PM IST
ಆತ ಸಾಮಾನ್ಯ ರೈತ. 4 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದ. ತನ್ನ ಹೊಲದ ಜೊತೆಗೆ ಕೆಲವರ ಜಮೀನಿನಲ್ಲೂ ಕೂಲಿ ಮಾಡೋದಕ್ಕೆ ಹೋಗ್ತಿದ್ದ. ಇನ್ನೂ ಮನೆಯಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳು. ಹಣಕಾಸಿಗೆ ಅಂಥ ತೊಂದರೆ ಏನೂ ಇರಲಿಲ್ಲ. ಆದ್ರೆ ಆವತ್ತು ಹೊಲದ ಕೆಲಸ ಮುಗಿಸಿ ಹೋದವನು ಮತ್ತೆ ಎಲ್ಲೂ ಕಾಣಿಸಲೇ ಇಲ್ಲ.
ಮನೆಯವರನ್ನ ಕೇಳಿದ್ರೆ ಗೊತ್ತಿಲ್ಲ ಅನ್ನೋದೊಂದೇ ಉತ್ತರ. ಅವನನ್ನು ಹುಡುಕೋಣ ಅಂತ ಗ್ರಾಮಸ್ಥರು ಕೇಳಿದ್ರೆ ನಿಮಗ್ಯಾಕೆ ನಮ್ಮ ಮನೆ ಚಿಂತೆ ಅನ್ನೋದಷ್ಟೇ ಅವರ ಉತ್ತರ. ಹಾಗಾದ್ರೆ ಆ ರೈತ ಎಲ್ಲಿಗೆ ಹೋದ? ಏನಾಯ್ತು ಆತನಿಗೆ? ಆವತ್ತು ಜಮೀನಿನ ಕೆಲಸ ಮುಗಿಸಿ ಹೋದವನನ್ನ ಹುಡುಕ ಹೊರಟ ಗ್ರಾಮಸ್ಥರಿಗೆ ಸಿಕ್ಕಿದ್ದೇನು? ಒಬ್ಬ ಅಮಾಯಕ ರೈತನ ನಿಗೂಢ ಸಾವಿನ ರಹಸ್ಯ ಇಲ್ಲಿದೆ ನೋಡಿ.