Oct 4, 2022, 2:54 PM IST
ದಕ್ಷಿಣಕನ್ನಡ (ಅ. 04): "ಚಡ್ಡಿಗಳೇ ಎಚ್ಚರ, ಪಿ.ಎಫ್.ಐ ನಾವು ಮರಳಿ ಬರುತ್ತೇವೆ" ಎಂದು ಬಂಟ್ವಾಳದಲ್ಲಿ ರಸ್ತೆ ಮೇಲೆ ಕಿಡಿಗೇಡಿಗಳು ಎಚ್ಚರಿಕೆ ಸಂದೇಶ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಈ ಘಟನೆ ನಡೆದಿದೆ. ಚಡ್ಡಿಗಳೇ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ಪಿಎಫ್ ಹೆಸರಲ್ಲಿ ರಸ್ತೆ ಮೇಲೆ ಬರೆಯಲಾಗಿದೆ. ಸ್ಥಳೀಯರು ಪುಂಜಾಲ್ ಕಟ್ಟೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬಂಟ್ವಾಳ ಭಾಗದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಸಕ್ರಿಯವಾಗಿತ್ತು. ಪಿಎಫ್ ಐನಲ್ಲಿ ಸಕ್ರಿಯವಾಗಿದ್ದವರೇ ಎಚ್ಚರಿಕೆ ಬರಹ ಬರೆದಿದ್ದಾರೆ ಎನ್ನಲಾಗಿದೆ. ಸ್ಪ್ರೇ ಪೈಂಟ್ ಬಳಸಿ ಕಿಡಿಗೇಡಿಗಳು ತಡರಾತ್ರಿ ರಸ್ತೆಯಲ್ಲಿ ಬರಹ ಬರೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಿಎಫ್ಐ ಬ್ಯಾನ್ ಬೆನ್ನಲ್ಲೇ ಆರ್‌ಎಸ್‌ಎಸ್ ಬ್ಯಾನ್ ಅಭಿಯಾನ: PFI Vs RSS ಎತ್ತಣಿಂದೆತ್ತ ಹೋಲಿಕೆ?