ವಿಜಯಪುರ; ಫೇಸ್ ಬುಕ್‌ ಲೈವ್‌ನಲ್ಲಿ ಕೊನೆ ಮಾತು ಹೇಳಿ ಸುಸೈಡ್... ಪತ್ನಿ ಹೇಳೋದೆ ಬೇರೆ!

Sep 29, 2021, 7:29 PM IST

ವಿಜಯಪುರ(ಸೆ. 29)  ಒಂದು ಫೇಸ್ ಬುಕ್ (Facebook) ಲೈವ್.. ಲೈವ್ ನಲ್ಲಿ ಆತ್ಮಹತ್ಯೆ ( Suicide) ಮಾಡಿಕೊಳ್ಳುತ್ತೇನೆ ಎಂದು ಹೇಳಿದ. ಕೆಲವೇ ಹೊತ್ತಿನಲ್ಲಿ ಆತನ ದೇಹ ಮರದಲ್ಲಿ ನೇತಾಡುತ್ತಿತ್ತು. ಮದುವೆಯಾಗಿದ್ದ ಹುಡುಗಿ ಕೈ ಕೊಟ್ಟಿದ್ದಳು. ನಂಬಿದ ಸ್ನೇಹಿತರೇ ಮೋಸ ಮಾಡಿದ್ದರು.

ಗೋವಾದಲ್ಲಿ ಪ್ರಣಯ ಗೀತೆ.. ನಂತರ ಅದೊಂದು ಕೊಲೆ

ಪ್ರೀತಿಸಿ ಮದುವೆ..  ಮದುವೆಯಾದವಳು ಒಂದೇ ವರ್ಷಕ್ಕೆ ಮನೆ ಬಿಟ್ಟಳು.    ಆದರೆ ಇನ್ನೊಂದು ಕಡೆ ಗಂಡನ ಮನೆಯವರ ಮೇಲೆ ಪತ್ನಿ ಆರೋಪ ಮಾಡಿದ್ದಾಳೆ. ನನಗೆ ಗಂಡನ ಮನೆಯಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದರು. ನನಗೆ ಹದಿನೆಂಟು ತುಂಬುವ ಮೊದಲೆ  ಇಷ್ಟ ಇಲ್ಲ ಎಂದರೂ ಮದುವೆ ಮಾಡಿದ್ದರು. ಬೇರೆಯವರ ಜತೆ ಹೋಗಿ ಮಲಗಿಕೊಂಡು ಬಾ ..ಹಣ ತೆಗೆದುಕೊಂಡು ಬಾ ಎಂದು ಹಿಂಸೆ ನೀಡುತ್ತಿದ್ದರು ಎಂದು ಪತ್ನಿ ಆರೋಪ ಮಾಡಿದ್ದಾಳೆ.