Jul 31, 2022, 3:56 PM IST
ಭಟ್ಕಳ/ತುಮಕೂರು(ಜು.31): ರಾಜ್ಯದಲ್ಲಿ ಮತ್ತೆ ಆಕ್ಟಿವ್ ಆದ್ರಾ ಉಗ್ರರು?, ಉಗ್ರರ ಸ್ಲೀಪರ್ ಸೆಲ್ ಆಗ್ತಾ ಇದೆಯಾ ಕರ್ನಾಟಕ? ಅನ್ನುವಂತ ಪ್ರಶ್ನೆಗಳು ಇದೀಗ ಮೂಡುತ್ತಿವೆ. ಇಂದು(ಭಾನುವಾರ) ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ತುಮಕೂರಿನಲ್ಲಿ ಎನ್‌ಐಎ ದಾಳಿ ನಡೆಸಿದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇಂದು ಬೆಳಿಗ್ಗೆ 4.15 ಸುಮಾರಿಗೆ ಭಟ್ಕಳದಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನ ವಶಕ್ಕೆ ಪಡೆಯಲಾಗಿದೆ. ದೆಹಲಿ ಹಾಗೂ ಬೆಂಗಳೂರು ಎನ್‌ಐಎ ತಂಡದಿಂದ ದಾಳಿ ಮಾಡಲಾಗಿದೆ. ಇನ್ನು ತುಮಕೂರಿನಲ್ಲಿ ಎನ್‌ಐಎ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.