Oct 19, 2021, 11:39 AM IST
ಬೆಂಗಳೂರು (ಅ. 19): ಪರಪ್ಪನ ಅಗ್ರಹಾರದ ರೌಡಿಯೊಬ್ಬ ಶಿವಮೊಗ್ಗದ ಉದ್ಯಮಿಗೆ ಬೆದರಿಕೆ ಹಾಕಿದ್ದಾನೆ. ಹೆಬ್ಬೆಟ್ ಮಂಜ, ಮಾರ್ಕೆಟ್ ಲೋಕಿ ಹೆಸರಿನಲ್ಲಿ ಧಮ್ಕಿ ಹಾಕಿದ್ದಾನೆ. ರೌಡಿ ಬೆದರಿಕೆಗೆ ಬಗ್ಗಿ ಉದ್ಯಮಿ ಶರತ್ ಎಂಬುವವರು ಹಣ ಕೊಟ್ಟಿದ್ದರು. ಕರೆ ಹೆಚ್ಚಾಗುತ್ತಿದ್ದಂತೆ ಶರತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ಖ್ಯಾತ ವಕೀಲನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಸಂತ್ರಸ್ತೆ ಜೊತೆಗಿನ ಆಡಿಯೋ ವೈರಲ್
ಹೆಬ್ಬೆಟ್ ಮಂಜ ಎಂಬ ಹೆಸರಲ್ಲಿ ರೌಡಿ ನಾಗೇಶ್, ಶರತ್‌ಗೆ ಕರೆ ಮಾಡುತ್ತಾರೆ. ಮೊದ ಮೊದಲು ಹೆದರಿದ ಶರತ್ ಹಣ ಕೊಡುತ್ತಾರೆ. ಆ ನಂತರ ದೂರು ಕೊಡುತ್ತಾರೆ. ಈ ರೌಡಿ ನಾಗೇಶ್, ಕೊಲೆ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವನಿಗೆ ಭಟ್ಕಳದ ಶಂಕಿತ ಉಗ್ರ ಸದ್ದಾಂ ಜೊತೆ ಲಿಂಕ್ ಇದೆಯಂತೆ.