ದೈವ ಕೋಲ ನಡೆಯುವಾಗ್ಲೇ ಊರಲ್ಲಿ ಬಿತ್ತು ಹೆಣ: ಮತ್ತೆ ಆ್ಯಕ್ಟೀವ್ ಆಯ್ತಾ ಕರಾವಳಿ ಅಂಡರ್‌ವರ್ಲ್ಡ್?

Feb 25, 2023, 1:53 PM IST

ಕರಾವಳಿ ಭಾಗದಲ್ಲಿ ತಣ್ಣಗಿದ್ದ ಭೂಗತ ಜಗತ್ತು ಮತ್ತೆ ಚಿಗುರುವ ಲಕ್ಷಣಗಳು ಕಾಣುತ್ತಿವೆ. ಬನ್ನಂಜೆ ರಾಜ, ರವಿ ಪೂಜಾರಿ ಮುಂತಾದ ಅಂಡರ್ ವರ್ಲ್ಡ್ ಡಾನ್‌ಗಳು ಸೆರೆಯಾದ ನಂತರ, ಭೂಗತ ಜಗತ್ತಿನಲ್ಲಿ ಒಂದು ವ್ಯಾಕ್ಯೂಮ್ ಕ್ರಿಯೇಟ್ ಆಗಿದೆ. ಆ ಸ್ಥಾನ ತುಂಬಲು ಪೈಪೋಟಿ ಶುರುವಾಗಿದೆ. ಆ ಪೈಪೋಟಿಯಲ್ಲಿ ಒಬ್ಬನ ಹೆಸರು ಈಗ ಕರಾವಳಿ ಹೆಚ್ಚಾಗಿ ಕೇಳಿಬರ್ತಿದೆ. ಅದಕ್ಕೆ ಕಾರಣ ಉಡುಪಿಯಲ್ಲಿ ನಡೆದ ಅದೊಂದು ಮರ್ಡರ್. ಅದೊಂದು ಗ್ರಾಮದಲ್ಲಿ ದೈವದ ಕೋಲ ನಡೆಯುತ್ತಿರುವಾಗ್ಲೇ ಅಲ್ಲೊಂದು ಹೆಣ ಬಿದ್ದಿತ್ತು. ಆ ಕೊಲೆಯ ಬೆನ್ನುಬಿದ್ದ ಪೊಲೀಸೆರಿಗೆ ಅಲ್ಲಿ ಭೂಗತ ಲೋಕದ ವಸನೆ ಬಡೆದಿತ್ತು. ಅಷ್ಟಕ್ಕೂ ಕರಾವಳಿಯಲ್ಲಿ ಭಾರಿ ಸದ್ದು ಮಾಡಿದ್ದ ಆ ಮರ್ಡರ್ ಯಾವುದು? ಆ ಮರ್ಡರ್ಗೂ ಭೂಗತ ಜಗತ್ತಿಗೂ ಇರುವ ನಂಟೇನು..? ಆ ಕೊಲೆಯ ಕಂಪ್ಲೀಟ್ ಡಿಟೇಲ್ಸ್ ಪಡೆಯುವುದೇ ಇವತ್ತಿನ ಎಫ್.ಐ.ಆರ್. 

ರಿಯಲ್ ಎಸ್ಟೇಟ್ ಉದ್ಯಮಿ, ಊರಲ್ಲಿ ಒಳ್ಳೆ ಹೆಸರು ಮಾಡಿದ್ದ ಶರತ್‌ನನ್ನ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ರು. ಯಾವಾಗ ಈ ಸುದ್ದಿ ಪೊಲೀಸರಿಗೆ ಸಿಗ್ತೋ ತನಿಖೆ ಶುರು ಮಅಡಿದ್ರು. ಆದ್ರೆ ಅವರಿಗೆ ಮೊದಲ ಕ್ಲೂ ಕೊಟ್ಟಿದ್ದೇ ಕೊಲೆಯಾದ ರಸ್ತೆಯಕಲ್ಲಿದ್ದ ಸಿಸಿ ಟಿವಿ. ಆ ಸಿಸಿ ಟಿವಿ ದೃಶ್ಯಗಳನ್ನ ನೋಡಿ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ರು. ಕಾರಣ ಶರತ್ ಕೊಲೆಯಲ್ಲಿ ಅವನ ಸ್ನೇಹಿತನೇ ಭಾಗಿಯಾಗಿದ್ದ. ಈ ಕೇಸ್‌ನಲ್ಲಿ ಕಾಣದ ಕೈ ಆಟವಾಡಿದೆ. ಇದನ್ನ ಪೊಲೀಸರೇ ಹೇಳ್ತಿದ್ದಾರೆ. ಆದ್ರೆ ಆ ಕಾಣದ ಕೈ ಬೇರೆ ಯಾವುದು ಅಲ್ಲ ಕರಾವಳಿ ಅಂಡರ್ವರ್ಲ್ಡ್. ಕಳೆದ ಕೆಲ ವರ್ಷಗಳಿಂದ ತಣ್ಣಗಿದ್ದ ಕರವಅಳಿ ಅಂಡರ್ವರ್ಲ್ಡ್ ಈಗ ಆ್ಯಕ್ಟೀವ್ ಆದಂತೆ ಕಾಣ್ತಿದೆ. ಅಷ್ಟಕ್ಕೂ ಶರತ್ ಕಲೆಗೂ ಅಂಡರ್ವರ್ಲ್ಡ್ಗೂ ಏನು ನಂಟು..? ಕೇವಲ ವ್ಯವಹಾರ ಉದ್ಯಮಗಳು ಮಾತ್ರವಲ್ಲ ಅಂಡರ್ ವರ್ಲ್ಡ್ ಗೂ ಕೋವಿಡ್ ಹೊಡೆತ ಕೊಟ್ಟಿತ್ತು. ಜನರು ವ್ಯವಹಾರ ನಡೆಸಿ ಹಣ, ಓಡಾಡಿದರೆ ತಾನೆ ಭೂಗತ ಪಾತಕಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಆಗೋದು. 

ಹಾಗೂ ಹೀಗೂ ಕರಾವಳಿಯ ವ್ಯವಹಾರ ಜಗತ್ತು ಮತ್ತೆ ನಾರ್ಮಲ್ ಆಗುತ್ತಿದೆ. ಹಾಗಾಗಿ ಮತ್ತೆ ಭೂಗತ ಜಗತ್ತು ಘರ್ಜನೆ ಆರಂಭಿಸಿದೆ. ಭೂಗತ ಲೋಕದ ಸಂಚಿನಲ್ಲಿ ನಡೆದ ಮಹತ್ವದ ಕೊಲೆ ಕೇಸೊಂದನ್ನು ಉಡುಪಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದ್ರೆ ಈ ಅಂಡರ್ವರ್ಲ್ಡ್ಗೂ ಶರತ್ ಕೊಲೆಗೂ ಏನ್ ನಂಟು..? ಅಲ್ಲೇ ಇರೋದು ನೋಡಿ ಕಹನಿ ಮೇ ಟ್ವಿಸ್ಟ್. ಶರತ್ ಬಗ್ಗೆ ಮೆಚ್ಚುಗೆಯ ಮಾತು ಕೂಡ ಇದೆ. ಗೆಳೆಯರಿಗೆ ಜೀವಕ್ಕೆ ಜೀವ ಕೊಡುತ್ತಿದ್ದ ಈತ, ಗೆಳೆಯರಿಂದಲೇ ಹತನಾಗಿರುವುದು ದುರಂತ. ಯಾವ ಕೆಲಸವನ್ನು ತನ್ನ ಕೈಚಳಕದಿಂದ ಮಾಡುತ್ತಿದ್ದ ಈತ, ತನ್ನವರೇ ಹೂಡಿದ ಸಂಚಿಕೆ ಬಲಿಯಾಗಿರೋದು ವಿಪರ್ಯಾಸ. ಇದರ ಜೊತೆಗೆ ಕರಾವಳಿ ಭಾಗದಲ್ಲಿ ಮತ್ತೆ ತಮ್ಮ ರೋಲ್ ಕಾಲ್ ದಂದೆಯನ್ನು ಆರಂಭಿಸಲು ಅನೇಕ ಭೂಗತ ಪಾತಕಿಗಳು ಕಾಯುತ್ತಿದ್ದಾರೆ. ಶರತ್ ಕೊಲೆ ಪ್ರಕರಣ ಭೂಗತ ಜಗತ್ತು ಮತ್ತೆ ಚಿಗುರಿಕೊಳ್ಳಲು ಅವಕಾಶ ನೀಡಿದೆ.