Suvarna FIR: OLX ನಲ್ಲಿ ಬೈಕ್ ಮಾರಾಟ ಪೋಸ್ಟ್, ಐನಾತಿ ಪೊಲೀಸಪ್ಪ ಸಿಕ್ಕಿ ಬಿದ್ದ!

Dec 26, 2021, 3:44 PM IST

ಬೆಂಗಳೂರಿನಲ್ಲಿ ಬೈಕ್ ಕಳ್ಳತನ (Bike Theft) ಹೆಚ್ಚಾಗುತ್ತಿದೆ. ದೂರು ಕೊಟ್ಟರೆ ಬೈಕ್ ಸಿಕ್ಕೇ ಬಿಡುತ್ತದೆಂಬ ಖಚಿತತೆ ಇಲ್ಲ. ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟದ ವೇದಿಕೆ ಒಎಲ್‌ಕ್ಸ್‌ (OLX) ನಲ್ಲಿ ಕೆಲ ದಿನಗಳ ಹಿಂದೆ ಬೈಕ್ ಮಾರಾಟಕ್ಕಿದೆ ಎಂದು ಪೋಸ್ಟ್ ಹಾಕಲಾಗುತ್ತದೆ. ಈ ಬಗ್ಗೆ ಅನುಮಾನಗೊಂಡ ಮಾಗಡಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ತಮ್ಮ ಮೇಲಧಿಕಾರಿಗಳಿಗೆ ತಿಳಿಸುತ್ತಾರೆ. ಆಗ ಎಸಿಪಿ ನಂಜುಂಗೇ ಗೌಡ ನೇತೃತ್ಬದಲ್ಲಿ ಸ್ಪೆಷಲ್ ಟೀಂ ರಚಿಸಲಾಗುತ್ತದೆ. ಆ ಬೈಕ್ ಖರೀದಿಸಲು ಮುಂದಾಗುತ್ತಾರೆ. ಮಾರಾಟ ಮಾಡಲು ಬಂದವರನ್ನು ಲಾಕ್ ಮಾಡಿ ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಫಿಯಾವೇ ಬೆಳಕಿಗೆ ಬರುತ್ತದೆ. ಇದರ ಕಿಂಗ್‌ಪಿನ್ ಯಾರು ಎಂದು ನೋಡಿದರೆ ಒಬ್ಬ ಪೊಲೀಸ್. ಯಾರು ಆ ಪೊಲೀಸಪ್ಪ..? ಹೆಗಿತ್ತು ಕಾರ್ಯಾಚರಣೆ ನೀವೇ ನೋಡಿ