Student Prabuddha Murder: ಅಕ್ಕ ಅಕ್ಕ ಅಂತಿದ್ದವನ್ನೇ ಕೊಂದುಬಿಟ್ಟ..! ಅದು ಆತ್ಮಹತ್ಯೆ ಅಲ್ಲ.. ಬರ್ಬರ ಕೊಲೆ..!

May 25, 2024, 3:30 PM IST

ಅವಳಿಗೆ ಇನ್ನೂ 20 ವರ್ಷ. ಪಿಯುಸಿ ಮುಗಿಸಿ ಮೆಡಿಕಲ್ ಕಲಿಯೋಕೆ ರೆಡಿಯಾಗ್ತಿದ್ದಳು..ಸಖತ್ ಧೈರ್ಯವಂತೆ, ಛಲವಂತೆ. ಆದ್ರೆ ಆವತ್ತೊಂದು ದಿನ ತನ್ನದೇ ಮನೆಯಲ್ಲೇ ಆಕೆ ಹೆಣವಾಗಿ ಸಿಕ್ಕಿದ್ದಳು. ಅದು ಆತ್ಮಹತ್ಯೆ(Suicide) ಅಂತಲೇ ಎಲ್ಲರೂ ಭಾವಿಸಿದ್ರು. ಕಾರಣ ಆಕೆ ಆ ಹಿಂದೆ ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದ್ರೆ ತನಿಖೆ ನಡೆಸಿದ ಪೊಲೀಸರು ಅನುಮಾನಸ್ಪದ ಸಾವು ಅಂತಲೇ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ರು. ಆದ್ರೆ ಘಟನೆ ನಡೆದ 8 ದಿನಗಳ ಬಳಿಕ ಪೊಲೀಸರು ಅದು ಆತ್ಮಹತ್ಯೆ ಅಲ್ಲ ಕೊಲೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಸಂಶಾಯಸ್ಪದ ಸಾವು ಅಂತ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಆರಂಭಿಸಿದ್ರು. ಇವತ್ತಿಗೆ ಆ ಹೆಣ್ಣುಮಗಳು ಸತ್ತು 9 ದಿನಗಳಾಗಿವೆ. ಈಗ ಪ್ರಬುದ್ಧ(Student Prabuddha) ಸಾವಿನ ಸೀಕ್ರೆಟ್ ರಿವೀಲ್ ಆಗಿದೆ. ಕೇವಲ 2 ಸಾವಿರ ಹಣಕ್ಕಾಗಿ ನಡೆದ ಕೊಲೆ(Murder) ಅದು. ಪ್ರಬುದ್ಧ ಸಹೋದರನ ಸ್ನೇಹಿತ ಆಗ್ಗಾಗೆ ಮನೆಗೆ ಬರ್ತಿದ್ದ. ಎಲ್ಲರ ಜೊತೆಯೂ ಕ್ಲೋಸ್ ಆಗಿದ್ದ.. ಇನ್ನೂ ಪ್ರಬುದ್ಧ ತಾಯಿ ಕೂಡ ಮನೆ ಮಗನಂತೆ ನೋಡಿಕೊಂಡಿದ್ರು..ಆದ್ರೆ ಆತ ಮಾಡಿದ್ದು ಮಾತ್ರ ಮನೆಹಾಳ್ ಕೆಲಸ.. ಆಗ್ಗಾಗೆ ಮನೆಗೆ ಬರ್ತಿದ್ದವನು ಒಂದು ದಿನ ಆಕೆಯ ಪರ್ಸ್ನಲ್ಲೇ 2 ಸಾವಿರ ಹಣ ಕಚ್ಚುಬಿಟ್ಟಿದ್ದ.. ಅದನ್ನ ಆಕೆ ಕಂಡು ಹಿಡಿದಿದ್ಲು.. 2 ಸಾವಿರ ಹಣ ಕೊಡು ಇಲ್ಲ ನಿನ್ನ ಹೆತ್ತವರಿಗೆ ಅಂತ ಹೆಳಿದ್ಲು.. ಅಷ್ಟೇ.. 2 ಸಾವಿರ ಹಣ ವಾಪಸ್ ಮಾಡಲಾಗದೇ ಅವಳನ್ನೇ ಮುಗಿಸಲು ನಿರ್ಧರಿಸಿಬಿಟ್ಟ.. ಕಾಲಿಗೆ ಬೀಳೋ ನೆಪದಲ್ಲಿ ಅವಳನ್ನ ಬೀಳಿಸಿ ಅವಳ ಕೈ ನತ್ತು ಕತ್ತು ಕತ್ತರಿಸಿದ. 14 ವರ್ಷದ ಬಾಲಕನಿಗೆ ಕೊಲೆಗಿಂತ ತನ್ನ ತಂದೆ ತಾಯಿಗೆ ಹೇಳಿಬಿಡ್ತಾಳೆ ಅನ್ನೋ ಭವಯೇ ಹೆಚ್ಚಾಗಿ ಕಂಡಿದೆ. ಅದೇ ಕಾರಣಕ್ಕೆ ಬಾಯಿ ತುಂಬಾ ಅಕ್ಕ ಅಕ್ಕ ಅಂತ ಕರೆಯುತ್ತಿದ್ದವಳನ್ನೇ ಕೊಂದುಬಿಟ್ಟಿದ್ದಾನೆ.

ಇದನ್ನೂ ವೀಕ್ಷಿಸಿ:  ಹನಿಟ್ರಾಪ್ ..ಆನ್‌ಲೈನ್‌ ವಂಚನೆ ಆಯ್ತು.. ಈಗ ಹಣ ಸುಲಿಗೆ ಮಾಡಲು ಖದೀಮರ ಹೊಸ ಪ್ಲಾನ್! ಕೇಳಿದ್ರೆ ಶಾಕ್‌ ಅಗ್ತೀರಾ !