ಪಾರ್ಟಿ ಮಾಡೋಣ ಬಾ ಅಂತ ಕರ್ಕೊಂಡು ಹೋಗಿ ಪ್ರಾಣ ತೆಗೆದ: ತಂದೆ ಕಥೆಯನ್ನೇ ಮುಗಿಸಿದ ಪಾಪಿ ಮಗ!

Sep 15, 2022, 11:54 AM IST

ಗದಗ, (ಸೆಪ್ಟೆಂಬರ್.15): ಮರ್ಡರ್ ಕಹಾನಿಗಳ ಹಿಂದೆ ಹೆಣ್ಣು, ಹೊನ್ನು ಮಣ್ಣಿನ ಮಸಲತ್ತು ಇದ್ದೇ ಇರುತ್ತೆ‌‌.. ಈ ಮೂರು ಕಾರಣಗಳೇ ಜೀವ ತೆಗೆಯೋದಕ್ಕೆ ಪ್ರೇರಣೆ ನೀಡುತ್ವೆ.. ಮಾನದ ವಿಷ್ಯವಾಗಿಯೂ ಕೊಲೆಗಳು ನಡೆದ ಉದಾಹರಣಗಳಿವೆ.. ಗದಗನಲ್ಲಿ ಇತ್ತೀಚೆಗೆ ನಡೆದ ಪ್ರತ್ಯೇಕ ಎರಡು ಮರ್ಡರ್ ಕೇಸ್ ಗಳಲ್ಲಿ ಇದೇ ಕಾರಣಗಳು ಕಂಡ್ಬದ್ವು.. ಎರಡು ಕೇಸ್.. ಎರಡು ಮೋಟಿವ್..

ಆಂಟಿ ಹಿಂದೆ ಬಿದ್ದು ಜೀವವನ್ನೇ ಕಳೆದುಕೊಂಡ ಬಡಪಾಯಿ ಯುವಕನ ಕಥೆ

ಒಂದೇ ವಾರದಲ್ಲಿ ಎರಡು ಮರ್ಡರ್‌ಗಳನ್ನ ನಾವು ಇವತ್ತು ಹೊತ್ತು ಬಂದಿದ್ದೇವೆ. ಮೊದಲಿಗೆ ನಾವು ಸ್ನೇಹಿತನನ್ನೇ ಕೊಲೆ ಮಾಡಿದ ಪಾಪಿಯೊಬ್ಬನ ಕಥೆ ಹೇಳ್ತೀವಿ. ಇಬ್ಬರೂ ಒಟ್ಟಿಗೆ ಕೆಲಸ ಮಾಡ್ತಿದ್ದವರು. ಕಷ್ಟ ಅಂತ ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನ ಬಳಿಯೆ ಕಾಸು ಪಡೆದಿದ್ದ. ಆದ್ರೆ ವಾಪಸ್ ಕೊಡಲು ಇನ್ನಿಲ್ಲದಂತೆ ಸತಾಯಿಸಿಬಿಟ್ಟಿದ್ದ. ಕಾಸು ಕೊಡಲು ಸತಾಯಿಸುತ್ತಿದ್ದಾನಲ್ಲ ಅನ್ನೋ ಕಾರಣಕ್ಕೆ ಅವನ ಕಥೆ ಮುಗಿಸಿಬಿಟ್ಟಿದ್ದಾನೆ. ಹೀಗೆ ಕೊಟ್ಟ ಹಣ ವಾಪಸ್ ಮಾಡಲಿಲ್ಲ ಅಂತ ಸ್ನೇಹಿತನನ್ನೇ ಮುಗಿಸಿದ ಕಥೆಯೇ ಇವತ್ತಿನ  ಎಫ್ ಐ ಆರ್......