Mar 2, 2023, 5:46 PM IST
ಉತ್ತರ ಕನ್ನಡ (ಮಾ.02): ಭಟ್ಕಳ ದಲ್ಲಿ ತಂದೆ ಮತ್ತು ಮಗ ಸೇರಿಕೊಂಡು ಇಡೀ ಬೀಗರ ಮನೆಯನ್ನ ಸ್ಮಶಾನ ಮಾಡಿ ಎಸ್ಕೇಪ್ ಆಗಿದ್ದರು. ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಂಡು ಅವರು ತಲೆ ಮರೆಸಿಕೊಂಡಿದ್ದರು. ಇಂದು ಅಪ್ಪ- ಮಗ ಪೊಲೀಸರು ಬಂಧಿಸಿದ್ದಾರೆ.
ಆದರೆ, ಅವರನ್ನ ಟ್ರ್ಯಾಪ್ ಮಾಡಿದ ರೀತಿ ನಿಜಕ್ಕೂ ರೋಚಕವಾಗಿದೆ. ನಾಲ್ವರನ್ನು ಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡ್ತಿದ್ದರು. ಪೊಲೀಸರು ಅದಕ್ಕೆರ ಪ್ರತ್ಯೇಕ ತಂಡವನ್ನು ರಚಿಸಿಕೊಂಡು ಫೀಲ್ಡ್‌ಗೆ ಇಳಿಯುತ್ತಾರೆ. ಅತ್ತಿಗೆ ವಿದ್ಯಾಳನ್ನೂ ವಶಕ್ಕೆ ಪಡೆಯುತ್ತಾರೆ. ಆದರೆ 2 ದಿನಗಳ ನಂತರ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀಗರ ಮನೆಯನ್ನ ಮಸಣ ಮಾಡಿ ಅದೇ ಮನೆಯ ಬಳಿಯೇ ತಮ್ಮ ರಕ್ತಸಿಕ್ತ ಬಟ್ಟೆಗಳನ್ನ ಸುಡ್ಡು ಭಟ್ಕಳ ಕಡೆ ಎಸ್ಕೇಪ್ ಆಗ್ತಾರೆ. ಒಂದು ಲೆಕ್ಕದಲ್ಲಿ ಅಪ್ಪ ಮಗ ಲಾಕ್ ಆಗಲು ಮೋದಿಯೇ ಕಾರಣ. ಭಟ್ಕಳ ದಲ್ಲಿ ಇರೋದಕ್ಕಾಗದೇ ಜಾಗ ಖಾಲಿ ಮಾಡಲು ಹೋಗಿ ಪೊಲೀಸರಿಗೆ ಈಸಿಯಾಗಿ ಬಲೆಗೆ ಬಿದ್ದಿದ್ದಾರೆ. ಒಂದು ಕುಟುಂಬ ಸರ್ವನಾಶವಾದ್ರೆ ಮತ್ತೊಂದು ಕುಟುಂಬ ಜೈಲು ಸೇರಿಕೊಂಡಿದೆ. ಇದೇ ಕಾರಣಕ್ಕೆ ಹೇಳೋದು ಕೋಪದ ಕೈಗೆ ಬುದ್ಧಿ ಕೊಟ್ರೆ ನಂತರ ಪಶ್ಚಾತಾಪ ಪಟ್ರೂ ಪ್ರಯೋಜನವಿಲ್ಲ.