Harsha Murder Case: ಕಾಣೆಯಾಗಿರುವ ಹರ್ಷನ ಮೊಬೈಲ್‌ ಗೆ ಪೊಲೀಸರ ಹುಡುಕಾಟ

Feb 24, 2022, 12:01 PM IST

ಶಿವಮೊಗ್ಗ(ಫೆ.24): ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೊಲೆಯಾದ ಹರ್ಷನ ಮೊಬೈಲ್ ಎಲ್ಲಿ ಹೋಗಿದೆ ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರು ವಾಟ್ಸಾಪ್‌ ಮೂಲಕ ಹರ್ಷನಿಗೆ ವೀಡಿಯೋ ಕಾಲ್‌ ಮಾಡಿ ಸಹಾಯ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಹರ್ಷ ಮನೆಯಿಂದ ಕಾಲ್‌ ನಲ್ಲಿ ಮಾತನಾಡಿಕೊಂಡು  ಹೊರಗೆ ಬಂದಿದ್ದ. ಇದೇ ವೇಳೆ ಕೊಲೆ ನಡೆದಿದೆ. ಕೊಲೆ ಬಳಿಕ  ಮೊಬೈಲ್‌ ನಾಪತ್ತೆಯಾಗಿರುವುದನ್ನು ಪೊಲೀಸರು ಕೂಡ ದೃಢಪಡಿಸಿದ್ದಾರೆ. ಹೀಗಾಗಿ ವಿಡಿಯೋ ಕಾಲ್ ಟ್ರೇಸ್ ಮಾಡುವ ಸಲುವಾಗಿ ಹುಡುಕಾಟ ನಡೆಸುತ್ತಿದ್ದಾರೆ.