ಶಿಡ್ಲಘಟ್ಟ;  ಹಣಕ್ಕಾಗಿ ಪೀಡಿಸುತ್ತಿದ್ದ ಲೇಡಿ ಪಿಎಸ್‌ಐ.. ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ

Oct 10, 2021, 5:50 PM IST

ಶಿಡ್ಲಘಟ್ಟ(ಅ. 10)  ಹಣಕ್ಕಾಗಿ ಶಿಡ್ಲಘಟ್ಟ ಪಿಎಸ್ ಐ (Karnataka Police) ಕಿರುಕುಳ (Harassment)ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಪೊಲೀಸ್ ಕಿರುಕುಳದಿಂದ ವೆಂಕಟೇಶ್ ಬಾಬು ಎಂಬುವರು ವಿಷ ಕುಡಿದು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎನ್ನಲಾದೆ.

ಬೆಂಗಳೂರು ಮಾಸ್ ಸುಸೈಡ್ ಹಿಂದೆ ಅಕ್ರಮ ಸಂಬಂಧದ ವಾಸನೆ

ಮೃತ ವೆಂಕಟೇಶ್ ಬಾಬು ಪತ್ನಿ ಮನೆ  ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮನೆ ಕೆಲಸ ಮಾಡುತ್ತಿದ್ದವಳು ಚಿನ್ನದ (Gold) ಸರ ಕದ್ದಿದ್ದಾಳೆ ಎಂಬ ಆರೋಪ ಬಂದಿದ್ದು. ಈ ಪ್ರಕರಣದ ವಿಚಾರಣೆ ನೆಪದಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದು ಆತ್ಮಹತ್ಯೆಗೆ ಶರಣಾದೆ ಎಂದು ವೆಂಕಟೇಶ್ ಬಾಬು ಸಾಯುವುದಕ್ಕೂ ಮುನ್ನ  ಹೇಳಿಕೆ ನೀಡಿದ್ದಾರೆ.