PSI Job Fraud: ಪಿಎಸ್‌ಐ ಹುದ್ದೆಗೆ 14 ಲಕ್ಷ ಗುಳುಂ, ಆರೋಪಿಗಳು ಅರೆಸ್ಟ್

Nov 27, 2021, 5:23 PM IST

ರಾಮನಗರ, (ನ.27): ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಗಳ ಹೆಸರು ಗಿರೀಶ್, ಶ್ರೀನಿವಾಸ್, ರೋಹಿತ್ ಕುಮಾರ್. ಈ ಮೂವರಿಗೆ ಕೇಳಿದಷ್ಟು ಹಣ ಕೊಟ್ರೆ ಸಾಕು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆಲಸ ಫಿಕ್ಸ್! ಹೀಗೆ ಮಾತುಗಳನ್ನ ಹಾಡಿಕೊಂಡು ದಿಲೀಪ್ ಎಂಬ ಯುವಕನಿಂದ ಬರೋಬ್ಬರಿ 14 ಲಕ್ಷ ಪಡೆದು ವಂಚಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

 

ಅಂದಹಾಗೆ, 2020 ರಲ್ಲಿ ಈ ವಂಚನೆ ನಡೆದಿದ್ದು, ಕುಂಬಳಗೂಡಿನ ರಾಮೋಹಳ್ಳಿಯ ಗೋವಿಂದರಾಜು ಹಾಗೂ ದಿಲೀಪ್ ತಂದೆ ಮಗ ವಂಚನೆ ಒಳಗಾಗಿರುವರು.  ಪಿಎಸ್‌ಐ ಹುದ್ದೆಗೆ 14 ಲಕ್ಷ ಗುಳುಂ, ಮೋಸ ಹೋಗುವವರು ಇರುವವರೆಗೂ, ಮೋಸ ಮಾಡುವವರೂ ಇರ್ತಾರೆ ಎನ್ನುವುದನ್ನು ಈ ಸ್ಟೋರಿ ಸಾಕ್ಷಿ.