ಗಣಪತಿ ಮೆರವಣಿಗೆ ನಡೆಸಿದ್ದೇ ಅಪರಾಧವಾಯ್ತಾ..? ರಾಗಿಗುಡ್ಡ ಗಲಾಟೆಗೆ ಕುಮ್ಮಕ್ಕು ಕೊಟ್ಟವರು ಯಾರು..?

Oct 6, 2023, 3:02 PM IST


ಇಡೀ ಮಲೆನಾಡನ್ನೇ ಬೆಚ್ಚಿ ಬೀಳಿಸಿದ ಘಟನೆ. ಮತಾಂಧರ ಅಟ್ಟಹಾಸ, ದರ್ಪ, ಧಾರ್ಷ್ಟ್ಯ. ನಾವು ಸಾಬ್ರು ಗೊತ್ತಾಲ್ಲಾ.. ನಮ್ಮ ತಂಟೆಗೆ ಬಂದ್ರೆ ಏನಾಗತ್ತೆ ಗೊತ್ತಲ್ಲಾ ಅಂತ ಪೊಲೀಸರ ಮುಂದೆಯೇ ಬೆದರಿಕೆಯ ಮಾತುಗಳು. ಹಿಂದೂ ಸಮುದಾಯದವರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ.(Stone pelting) ಮನೆಗೆ ನುಗ್ಗಿ ಹಲ್ಲೆ ದೌರ್ಜನ್ಯ. ಇದು ಭಾನುವಾರ ಶಿವಮೊಗ್ಗದ (Shivamogga) ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ಕಂಡು ಬಂದಿದ್ದ ಭಯಾನಕ ಘಟನೆ.ಈದ್ ಮಿ ಲಾದ್ ಹಬ್ಬದ ಮೆರವಣಿಗೆ ವೇಳೆ ಕೆಲ ಮತಾಂಧ ಶಕ್ತಿಗಳು ನಡೆಸಿದ ಅಟ್ಟಹಾಸವನ್ನು ಇಡೀ ರಾಜ್ಯವೇ ಖಂಡಿಸ್ತಾ ಇದೆ. ಅಮಾಯಕರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ, ಹಿಂದೂ ಸಮಾಜದ(Hindus) ಯುವಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಜನ ಆಕ್ರೋಶ ಹೊರ ಹಾಕ್ತಾ ಇದ್ದಾರೆ. ಧರ್ಮಾಂಧರು ನಡೆಸಿದ ದೌರ್ಜನ್ಯವನ್ನ ಎಲ್ಲರೂ ಖಂಡಿಸ್ತಾ ಇದ್ದಾರೆ. ರಾಗಿಗುಡ್ಡ ಘಟನೆಯ ಬಗ್ಗೆ ಜನಾಕ್ರೋಶ ಸಿಡಿದು ನಿಂತಿರೋ ಹೊತ್ತಲ್ಲೇ ಗುರುವಾರ ರಾಗಿಗುಡ್ಡ 8ನೇ ಕ್ರಾಸ್‌ಗೆ ಭೇಟಿ ನೀಡಿದ ಬಿಜೆಪಿ (BJP) ನಾಯಕರ ನಿಯೋಗ ಸತ್ಯ ಶೋಧನೆಯ ಪ್ರಯತ್ನ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಡಾ.ಸಿ.ಎನ್ ಅಶ್ವತ್ಥನಾರಾಯಣ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ, ಬಿಜೆಪಿ ಎಂಎಲ್ಸಿಗಳಾದ ಭಾರತಿ ಶೆಟ್ಟಿ ಮತ್ತು ರವಿಕುಮಾರ್  ರಾಗಿಗುಡ್ಡಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಗದಲ್ಲಿದ್ರು. ಘಟನೆ ನಡೆ ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಮಾತನಾಡಿ ಬಿಜೆಪಿ ನಾಯಕರು ಇದೊಂದು ಪೂರ್ವ ನಿಯೋಜಿತ ಕೃತ್ಯ ಅಂತ ಆರೋಪಿಸಿದ್ದಾರೆ.