Neha Murder Case: ಯುಪಿ ಮಾಡೆಲ್‌ಗೆ ಆಗ್ರಹಿಸಿ ಹೆಚ್ಚಿದ ಪ್ರತಿಭಟನೆ : ನೇಹಾ ಹಿರೇಮಠ ಹತ್ಯೆ..ರಾಜಕೀಯವಾಗಿದ್ದೇಕೆ..?

Apr 23, 2024, 10:37 AM IST

ನೇಹಾ ಹತ್ಯೆಯಿಂದಾಗಿ ರಾಜ್ಯದಲ್ಲಿ ಎದ್ದಿದ್ದ ಆಕ್ರೋಶ ಇನ್ನೂ ತಣ್ಣಗಾಗಿಲ್ಲ ದಿನದಿಂದ ದಿನಕ್ಕೆ ಹತ್ಯೆ ಖಂಡಿಸಿ ಪ್ರತಿಭಟನೆ, ವಿರೋಧ ಹೆಚ್ಚುತ್ತಲೇ ಇದೆ. ನೇಹಾ ಕೊಲೆಗೈದ ಪಾಪಿ ಫಯಾಜ್‌ಗೆ(Fayaz) ಯುಪಿ ಮಾಡೆಲ್ ಟ್ರೀಟ್‌ಮೆಂಟ್‌ ಕೊಡಬೇಕೆಂದು ರಾಜ್ಯ ಆಗ್ರಹಿಸುತ್ತಿದೆ. ಆದ್ರೆ ರಾಜ್ಯ ಸರ್ಕಾರ ಮಾತ್ರ ಇದ್ಯಾವುದಕ್ಕೂ ಕಿವಿಗೊಡದೆ, ಕೊಲೆಗಾರನ(Murder) ಮನೆಗೆ ಬಿಗಿ ಭದ್ರತೆ ಕೊಟ್ಟು ಇದನ್ನೆಲ್ಲ ಕಾನುನೂ ನೋಡಿಕೊಳ್ಳುತ್ತೆ ಎಂದು ಜಾರಿಕೊಳ್ಳುವ ಕೆಲ್ಸ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ರೇಪಿಸ್ಟನೊಬ್ಬನಿಗೆ ಯುಪಿ ಮಾದರಿ ಟ್ರೀಟ್ಮೆಂಟ್ ಕೊಡಲಾಗಿದೆ. ನೇಹಾ ಹಿರೇಮಠ(Neha Murder Case) ಇನ್ನೂ 23 ವರ್ಷದ ಯುವತಿ. ಬದುಕಿ ಬಾಳಬೇಕಿದ್ದ ಜೀವ. ವಿದ್ಯಾರ್ಥಿಯಾಗಿದ್ದ ನೇಹಾ ಹಿರೇಮಠ ಬದುಕಿನಲ್ಲಿ ದೊಡ್ಡ ಕನಸು ಕಂಡವಳು. ಆದ್ರೆ ಫಯಾಜ್ ಎಂಬ ರಾಕ್ಷಸನ ಕ್ರೌರ್ಯಕ್ಕೆ ನೇಹಾ ಕಾಲೇಜ್ ಕ್ಯಾಂಪಸ್‌ನಲ್ಲೇ ಪ್ರಾಣ ಬಿಟ್ಟಳು. ಕಾಲೇಜ್ ಕ್ಯಾಂಪಸ್‌ನಲ್ಲೇ ನೇಹಾ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಕೊಲೆಯಾಗಿದ್ದು ನೇಹಾ ಹಿರೇಮಠ, ಕೊಲೆಗೈದಿದ್ದು ಫಯಾಜ್ ಎಂಬ ರಾಕ್ಷಸ. ಹೀಗಾಗಿ ಈ ಕೊಲೆ ಕೇಸ್ ರಾಜಕೀಯ ಸ್ವರೂಪ ಪಡೆದುಕೊಳ್ತು. ಒಂದು ಕಡೆ ಬಿಜೆಪಿ ಪಕ್ಷದವರು ಇದು ಲವ್ ಜಿಹಾದ್ ಎಂದು ವಿರೋಧಿಸೋದಕ್ಕೆ ಆರಂಭಿಸಿತು. ಆದ್ರೆ, ಬಿಜೆಪಿಯ(BJP) ಈ ವಿರೋಧಕ್ಕೆ ಆತುರದ ಉತ್ತರ ಕೊಟ್ಟ ಸಿಎಂ ಸಿದ್ದು, ತನಿಖೆಗು ಮುನ್ನವೇ ಇದು ಲಚ್ ಜಿಹಾದ್ ಅಲ್ಲವೆಂದು ಹೇಳಿ ಕ್ಲೀನ್ ಚೀಟ್ ಕೊಡುವ ಪ್ರಯತ್ನ ಮಾಡಿದರು.

ಇದನ್ನೂ ವೀಕ್ಷಿಸಿ: ಪ್ರಜ್ವಲ್ VS ಶ್ರೇಯಸ್ ಯಾರಿಗೆ ಸಿಂ'ಹಾಸನ'? ಕುಟುಂಬ ರಾಜಕಾರಣಕ್ಕೆ ಏನಂತಾರೆ ಹಾಸನ ಜನ?