May 5, 2020, 1:12 PM IST
ಬೆಂಗಳೂರು(ಮೇ.05): ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಮದ್ಯ ಮಾರಾಟ ಆರಂಭವಾಗಿದೆ. ಇದರ ಬೆನ್ನಲ್ಲೇ ಎಣ್ಣೆ ನಶೆಯಲ್ಲಿ ಒಂದೊಂದಾಗಿ ಹೆಣಗಳು ಉರುಳಲಾರಂಭಿಸಿದೆ.
ಸೋಮವಾರವಷ್ಟೇ ಎಣ್ಣೆ ಏಟಿನಲ್ಲಿ ರೌಡಿಶೀಟರ್ ಒಬ್ಬರ ಹತ್ಯೆಯಾಗಿತ್ತು. ಇಂದು ಶ್ರೀನಿವಾಸ್ ಎನ್ನವವನ ತಲೆಗೆ ಸಂತೋಷ್ ದೊಣ್ಣೆಯಿಂದ ಬಾರಿಸಿದ್ದಾನೆ. ಇಂಟರ್ ಬ್ಲೀಡಿಂಗ್‌ನಿಂದಾಗಿ ಶ್ರೀನಿವಾಸ್ ಜೀವ ಬಿಟ್ಟಿದ್ದಾನೆ. ಎಣ್ಣೆ ಮಾರಾಟವಾಗುತ್ತಿದ್ದಂತೆ ಪಾತಾಕ ಲೋಕದ ಅನಾವರಣವಾಗಿದೆ.
ಆದಾಯದ ನೆಪದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಸರಿಯಲ್ಲ: ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಮತ
ಮಾರ್ಚ್ 04ರಿಂದ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಪಾರ್ಸೆಲ್ ತೆಗೆದುಕೊಂಡು ಹೋಗಲು ಸರ್ಕಾರ ಅನುಮತಿ ನೀಡಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.