Dec 21, 2020, 1:45 PM IST
ಹುಬ್ಬಳ್ಳಿ (ಡಿ. 21): ನಗರದ ಜನನಿಬೀಡ ಪ್ರದೇಶದಲ್ಲಿಯೇ ಯುವತಿಗೆ ತಲ್ವಾರ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನಗರದ ದೇಶಪಾಂಡೆನಗರದಲ್ಲಿ ಘಟನೆ ನಡೆದಿದೆ. ಯುವತಿಯ ಪ್ರೇಮಿಯೇ ಈ ಕೃತ್ಯ ಎಸೆಗಿದ್ದು, ಪೊಲೀಸರು ಬಂಧಿಸಿದ್ದಾರೆ. ಘಟನೆಯ ನೋಡುತ್ತಿದ್ದ ಹಲವರು ಆತಂಕದಿಂದ ದೂರ ಓಡಿ ಹೋಗಿದ್ದು, ಕೆಲವರು ದೂರದಿಂದ ವೀಡಿಯೋ ಮಾಡಿಕೊಂಡಿದ್ದಾರೆ.