Dec 4, 2024, 11:38 PM IST
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಬರ್ಬರ ಕೊಲೆ, ರಿಯಲ್ ಎಷ್ಟೆಟ್ ಉದ್ಯಮಿ ಗೀರಿಶ ಕರಡಿಗುಡ್ಡ 45 ಎಂಬುವವರ ಬರ್ಬರ ಕೊಲೆ ನಡೆದಿದೆ. ಗೀರಿಶ್ ನ ಸೊಸೆ ಧಾರವಾಡ ಎಸ್ಪಿ ಕಚೇರಿಯಲ್ಲೆ ಹವಾಲ್ದಾರ ಆಗಿ ಕೆಲಸ ಮಾಡುತ್ತಿದ್ದ ಮಹಿಳಾ ಪೋಲಿಸ್ ಪೇದೆ. ಪೋಲಿಸರ ಕುಟುಂಬದಲ್ಲೆ ವ್ಯಕ್ತಿಯ ಕೊಲೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದೆ ವೇಳೆ ಚಾಕು ಮತ್ತು ಮಾರಕಾಸ್ತ್ರಗಳಿಂದ ಬರ್ಬರವಾಗಿ ದುಶ್ಯಕರ್ಮಿಗಳು ಕೊಲೆ ಮಾಡಿದ್ದಾರೆ. ಮದ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಮಲಗಿದ್ದಾಗ ಕೊಲೆ ಮಾಡಿದ್ದಾರೆ.
ಮನೆಯ ಹಿತ್ತಲು ಬಾಗಿಲಿನಿಂದ ಬಂದು ಕೊಲೆ ಮಾಡಿ ಪರಾರಿಯಾದ ದುಶ್ಯಕರ್ಮಿಗಳು ಸ್ಥಳಕ್ಕೆ ಎಸ್ಪಿ ಗೋಪಾಲ ಬ್ಯಾಕೋಡ, ಎ ಎಸ್ ಪಿ ಬರಮಣಿ, ಸಿಪಿಐ ಸಮಿರ್ ಮುಲ್ಲಾ ಭೇಟಿ ನೀಡಿದರು. ಶ್ವಾನದಳ, ಬೆರಳಚ್ಚು ತಜ್ಞರಿಂದ ಕೃತ್ಯ ನಡೆದ ಸ್ಥಳದಲ್ಲಿ ಪರಿಶಿಲನೆ ನಡೆದಿದೆ. ಆರೋಪಿಗಳಿಗಾಗಿ ಪೋಲಿಸರ ಹುಡುಕಾಟ, ಗರಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಆರೋಪಿಗಳ ಶೋಧನೆಗಾಗಿ ಎರಡು ತಂಡ ರಚನೆ ಮಾಡಿದ ಎಸ್ಪಿ ಆದಷ್ಟೂ ಬೇಗ ಆರೋಪಿಗಳನ್ನ ಪತ್ತೆ ಹಚ್ಚಲಾಗುವುದು ಎಂದ ಎಸ್ಪಿ ಗೋಪಾಲ ಬ್ಯಾಕೋಡ ಹೇಳಿದ್ದಾರೆ.