Dec 6, 2024, 11:08 AM IST
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜೈಲು ಸೇರಿ ಸದ್ಯ ವೈದ್ಯಕೀಯ ಕಾರಣ ನೀಡಿ ಬೇಲ್ ಮೇಲೆ ಹೊರಗೆ ಬಂದಿರುವ ನಟ ದರ್ಶನ್ ಹಾಗೂ ಇತರೆ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ. ಇಂದು ಆರೂ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಲಿದ್ದಾರೆ.
ನ್ಯಾ. ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ವಾದ ಮಂಡನೆ ನಡೆಯಲಿದೆ. ಇದೀಗ ಎಸ್‌ಪಿಪಿ ಪ್ರಸನ್ನಕುಮಾರ್ ಆರೋಪಿಗಳ ಪಾತ್ರ ಹಾಗೂ ಸಂಚಿನ ಕುರಿತು ವಾದಿಸಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.