ಧರ್ಮನಿಂದನೆ ಪೋಸ್ಟ್ ಹಾಕೋ ಮುನ್ನ ಇರಲಿ ಎಚ್ಚರ, ಸೈಬರ್ ಕ್ರೈಂನಿಂದ ಕ್ಷಿಪ್ರ ಕಾರ್ಯಾಚರಣೆ!

Jul 13, 2023, 6:07 PM IST

ಮಂಗಳೂರು(ಜು.13) ಮಂಗಳೂರಿನಲ್ಲಿ ಮತ್ತೆ ಧರ್ಮನಿಂದನೆ ಪೋಸ್ಟ್ ಅಬ್ಬರ ಆರಂಭಗೊಂಡಿದೆ. ನಕಲಿ ಖಾತೆಗಳ ಮೂಲಕ ಕೊರಗಜ್ಜ ದೈವವನ್ನು ನಿಂದಿಸಿ ಹಲವು ಪೋಸ್ಟ್‌ಗಳು ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮಭಾವನೆ ಕೆರಳಿಸುವ ಪೋಸ್ಟ್‌ಗಳನ್ನು ಹಾಕಿ ಮಂಗಳೂರಿನ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಬಿಜೆಪಿ ಶಾಸಕ ಭರತ್ ಶೆಟ್ಟಿ ಮಂಗಳೂರು ಕಮಿಷನರ್‌ಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಸೈಬರ್ ಕ್ರೈಂ ಕಾರ್ಯಪ್ರವೃತ್ತಗೊಂಡಿದ್ದು, 21 ಪ್ರಕರಣ ದಾಖಲಿಸಿದೆ.