ಶಾಂತಿ ನಗರ ಅಶಾಂತವಾಗಿದ್ದೇಗೆ..? ಗಲಭೆಯ ಮುನ್ಸೂಚನೆ ನೀಡಿತ್ತಾ ಟಿಪ್ಪು-ಔರಂಗಜೇಬ್ ಕಟೌಟ್..?

Oct 3, 2023, 3:42 PM IST


ಅದು ಶಾಂತಿ ನಗರ... ಶಾಂತಿ ಸೌಹಾರ್ಧತೆಗೆ ಹೆಸರುವಾಗಿದ್ದ ನಗರ. ಆದ್ರೆ ಇದೇ ನಗರ ಇವತ್ತು ಧಗಧಗ ಅಂತ ಉರಿಯುತ್ತಿದೆ. ರಾಗಿಗುಡ್ಡ(Ragigudda) ಅಂತಲೇ ಕರೆಯುವ ಈ ಶಾಂತಿ ನಗರದಲ್ಲಿ ಈದ್ ಮೆರವಣಿಗೆ(Eid procession) ಟೈಂನಲ್ಲಿ ನಡೆದ ಗಲಭೆ ಇವತ್ತು ಮಲೆನಾಡನ್ನ ಬೆಂಕಿ ಉಂಡೆಯನ್ನಾಗಿಸಿದೆ. ಅಷ್ಟಕ್ಕೂ ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ನಡೆದಿದ್ದೇನು. ಪುಟ್ಟ ಮಕ್ಕಳು ಅನ್ನೋದನ್ನೂ ನೋಡದೇ ಕಿಡಿಗೇಡಿಗಳು ಕಲ್ಲು ತೂರಾಟ (Stone pelting) ನಡೆಸಿದ್ರು. ಅಲ್ಲಿ ನಡೆದ ಒಂದು ಸಣ್ಣ ಕಿರಿಕ್ ಗಲಭೆಗೆ ತಿರುಗುವಂತಾಯ್ತು. ಸಣ್ಣ ಕಿರಿಕ್.. ಗಲಭೆಗೆ ಕಾರಣವಾಗಿಬಿಟ್ಟಿತ್ತು.. ನೋಡ ನೋಡ್ತಿದ್ದಂತೆ ರಾಗಿಗುಡ್ಡ.. ಬೆಂಕಿಯುಂಡೆಯಾಗಿಬಿಡ್ತು. ಕಿಡಿಗೇಡಿಗಳು ಮನಬಂದಂತೆ ಕಲ್ಲು ತೂರಿದ್ರು. ಆದ್ರೆ ಇದೇ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಗೂ ಕಲ್ಲುಗಳು ಬಿದ್ವು. ಆದ್ರೆ ಆ ಕೂಡಲೇ ನಿಷೇದಾಜ್ಞೆ ಜಾರಿಗೊಳಿಸಿದ ಜಿಲ್ಲಾಡಳಿತ ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು. ಆದ್ರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇದೇ ಗಲಭೆ ನ್ಯಾಷನಲ್ ನ್ಯೂಸ್ ಆಗಿಬಿಡ್ತು. ಅದ್ರೆ ಹೋಂ ಮಿನಿಸ್ಟರ್ ಇದು ಸಣ್ಣ ಘಟನೆ ಅನ್ನುವ ಮೂಲಕ ರಾಜಕೀಯ ಕೆಸರೆರಚಾಟಕ್ಕೂ ಈ ಗಲಭೆ  ಕಾರಣವಾಗಿಬಿಡ್ತು. ಮೆರವಣಿಗೆ ಟೈಂನಲ್ಲಿ ಕೊಂಚ ಎಚ್ಚರ ವಹಿಸಿದ್ದಿದ್ರು ಇವತ್ತು ಶಿವಮೊಗ್ಗ ಶಾಂತವಾಗಿರುತ್ತಿತ್ತು. ಆದ್ರೆ ಗಣೇಶ ಹಬ್ಬದಲ್ಲಿ ಇದ್ದಷ್ಟು ಆ್ಯಕ್ಟೀವಾಗಿರದ ಪೊಲೀಸರು ಅದಕ್ಕೆ ಬಾರಿ ದಂಡವನ್ನೇ ತೆತ್ತುತ್ತಿದ್ದಾರೆ. ಇನ್ನೂ ಇದೇ ಗಲಭೆಯನ್ನ ರಾಜಕಾರಣಿಗಳು ಬಂಡವಾಳವಾಗಿಸಿಕೊಂಡಿದ್ದು ಮಾತ್ರ ವಿಪರ್ಯಾಸ.

ಇದನ್ನೂ ವೀಕ್ಷಿಸಿ:  ಈದ್ ಹಬ್ಬದ ನೆಪದಲ್ಲಿ ಮತಾಂಧರ ಹುಚ್ಚಾಟ ನಡೆಯಿತಾ..? ಮತಾಂಧರ ಕೈಗೆ ಸಿಕ್ಕನಾ ಮತ್ತೊಬ್ಬ ಹೊಸ ಹೀರೋ.. ?