Jun 24, 2021, 4:57 PM IST
ಬೆಂಗಳೂರು(ಜೂ. 24) ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಯಾಗಿದೆ. ರೇಖಾ ಕದಿರೇಶ್ ಸಹಕಾರದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ನನ್ನ ಮೇಲೆ ಸಲ್ಲದ ಆರೋಪ ಮಾಡಲಾಗುತ್ತಿದೆ. ರೇಖಾ ಅವರನ್ನು ನನ್ನ ಸಹೋದರಿ ಎಂದು ಭಾವಿಸಿದ್ದೆ. ಎನ್ ಆರ್ ರಮೇಶ್ ಅವರಿಗೆ ಕನಸಿನಲ್ಲಿಯೂ ನಾನೇ ಬರುತ್ತಿರಬಹುದು ಎಂದಿದ್ದಾರೆ.