ಅಲೋಕ್ ಕುಮಾರ್‌ಗೆ ತಪ್ಪದ ಕಂಟಕ, ಪೋನ್‌ ಕದ್ದಾಲಿಕೆ ಮರು ತನಿಖೆ

Oct 18, 2021, 9:16 PM IST

 ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್(Alok Kumar) ವಿರುದ್ಧ ದಾಖಲಾಗಿರುವ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI )ಸಲ್ಲಿಸಿರುವ ಬಿ ರಿಪೋರ್ಟ್​ ಅನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.  ಪ್ರಕರಣದ ಸಂಬಂಧ ತನಿಖೆಯನ್ನು ಮುಂದುವರಿಸಲು ಸೂಚಿಸಿರುವ ಕೋರ್ಟ್​(Court) ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ತಿಳಿಸಿದೆ.

ಇಬ್ಬರು ಐಪಿಎಸ್ ಅಧಿಕಾರಿಗಳ ನಡುವೆ ಬಿಗ್ ಫೈಟ್

ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್​ಗೆ ಮತ್ತೋರ್ವ ಎಡಿಜಿಪಿ ಭಾಸ್ಕರ್ ರಾವ್ ತಕರಾರು ಸಲ್ಲಿಸಿದ್ದರು. ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್​ ಅನ್ನೇ ದೋಷಾರೋಪ ಪಟ್ಟಿಯಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಭಾಸ್ಕರ್ ರಾವ್ ಕೋರಿದ್ದರು. ಈ ಅರ್ಜಿಯನ್ನೂ ಸಿಬಿಐ ನ್ಯಾಯಾಲಯ ತಿರಸ್ಕರಿಸಿದೆ. 17ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ಸಂಬಂಧ ಸಿಬಿಐನಿಂದಲೇ ಪ್ರಕರಣದ ಮರು ತನಿಖೆ ನಡೆಯಬೇಕು ಎಂದು ನ್ಯಾಯಾಲಯ ಸೂಚಿಸಿತು.